Thursday, March 28, 2024
Homeಕರಾವಳಿಶಿರಾಡಿಘಾಟ್ ನಲ್ಲಿ ಭೂಕುಸಿತ ಹಿನ್ನೆಲೆ: ಪರ್ಯಾಯ ಮಾರ್ಗದಲ್ಲಿ ಲಘು ವಾಹನಗಳು ಸಂಚರಿಸಲು ಅವಕಾಶ ನೀಡಿ ಆದೇಶ

ಶಿರಾಡಿಘಾಟ್ ನಲ್ಲಿ ಭೂಕುಸಿತ ಹಿನ್ನೆಲೆ: ಪರ್ಯಾಯ ಮಾರ್ಗದಲ್ಲಿ ಲಘು ವಾಹನಗಳು ಸಂಚರಿಸಲು ಅವಕಾಶ ನೀಡಿ ಆದೇಶ

spot_img
- Advertisement -
- Advertisement -

ಹಾಸನ: ಶಿರಾಡಿಘಾಟ್ ನಲ್ಲಿ ಭೂಕುಸಿತ ಹಿನ್ನೆಲೆ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಕಾರು,ಜೀಪು, ಟೆಂಪೊ, ಮಿನಿ ವ್ಯಾನ್ ಆಂಬುಲೆನ್ಸ್  ವಾಹನಗಳು  ಏಕಮುಖವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಸಕಲೇಶಪುರ, ಆನೆಮಹಲ್, ಕ್ಯಾನಹಳಹಳ್ಳಿ, ಚಿನ್ನಹಳ್ಳಿ,ಕಡಗರಹಳ್ಳಿ ಮಾರ್ಗದಲ್ಲಿ ಮಾರನಹಳ್ಳಿ ತಲುಪಿ ಮಂಗಳೂರಿಗೆ ಹೋಗಲು ಅವಕಾಶ ನೀಡಲಾಗಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಹೋಗೋ ಕಾರು ಜೀಪು, ಟೆಂಪೊ, ಮಿನಿ ವ್ಯಾನ್ ಗಳಿಗೆಮಾರನಹಳ್ಳಿಯಿಂದ‌ ಕಾಡುಮನೆ, ಕಾರ್ಲೆ ಕೂಡಿಗೆ, ಆನೆಮಹಲ್ ಸಕಲೇಶಪುರ ಮಾರ್ಗದ ಮೂಲಕ ಬೆಂಗಳೂರಿಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ.

ಲಘು ವಾಹನಗಳಿಗೆ ಶಿರಾಡಿಘಾಟ್ ನಲ್ಲೇ ಪರ್ಯಾಯ ಮಾರ್ಗ ದಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ.ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಶಿರಾಡಿಘಾಟ್ ನಲ್ಲೇ ಪರ್ಯಾಯ ಮಾರ್ಗದ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಒದಗಿಸಲಾಗಿದೆ‌.

ಹಾಸನ ಡಿಸಿ ಆರ್ ಗಿರೀಶ್ ಶಿರಾಡಿಘಾಟ್ ಬಂದ್ ಮಾರ್ಗಸೂಚಿ ಬದಲಿಸಿ,ಎರಡೂ ಕಡೆಯಿಂದ ಯಾವುದೇ ಸಮಸ್ಯೆ ಆಗದಂತೆ ಏಕ ಮುಖ ಸಂಚಾರಕ್ಕೆ ಅವಕಾಶ ನೀಡಿ ಆದೇಶ ನೀಡಿದ್ದಾರೆ

- Advertisement -
spot_img

Latest News

error: Content is protected !!