Saturday, June 6, 2026
Homeಕರಾವಳಿಉಡುಪಿಉಡುಪಿ: ಗ್ರಾಮ ಪಂಚಾಯತ್ ಸದಸ್ಯನಿಂದ ಮಹಿಳೆ ಹಾಗೂ ಆಕೆಯ ಪುತ್ರಿ ಮೇಲೆ ಹಲ್ಲೆ ಆರೋಪ

ಉಡುಪಿ: ಗ್ರಾಮ ಪಂಚಾಯತ್ ಸದಸ್ಯನಿಂದ ಮಹಿಳೆ ಹಾಗೂ ಆಕೆಯ ಪುತ್ರಿ ಮೇಲೆ ಹಲ್ಲೆ ಆರೋಪ

- Advertisement -
- Advertisement -

ಉಡುಪಿ; ಗ್ರಾಮ ಪಂಚಾಯತ್ ಸದಸ್ಯನೊಬ್ಬ ಮಹಿಳೆ ಹಾಗೂ ಆಕೆಯ ಪುತ್ರಿ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ರಸ್ತೆ ತಕರಾರು ಹಿನ್ನೆಲೆ ಆತ್ರಾಡಿ ಗ್ರಾಮ ಪಂಚಾಯತ್‌ ಸದಸ್ಯನೋರ್ವ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಆತ್ರಾಡಿ ನಾಗಬನ ನಿವಾಸಿ ಆರತಿ(45)ಹಲ್ಲೆಗೊಳಗಾದ ಮಹಿಳೆ.

ಆತ್ರಾಡಿ ಗ್ರಾಮ ಪಂಚಾಯತ್‌ ನವರು ಮನೆಯವರ ವಿರೋಧದ ನಡುವೆ ಕಾಂಕ್ರೀಟ್‌ ರಸ್ತೆ ನಿರ್ಮಿಸಲು ತಯಾರು ನಡೆಸಿದ್ದರು. ಮನೆಯವರ ಆಕ್ಷೇಪ ಇದ್ದರೂ ರಸ್ತೆ ಕಾಮಗಾರಿಗೆ ಪ್ರಾರಂಭಿಸಿದ್ದನ್ನು ಆರತಿ ಪ್ರಶ್ನಿಸಿದ್ದರು.

ಈ ವೇಳೆ ಆರತಿಯವರಿಗೆ ಹಲ್ಲೆ ನಡೆಸಿ ದೂಡಿ ‌ಹಾಕಿದ್ದು, ಪರಿಣಾಮ ತಲೆಗೆ ಗಂಭೀರ ಗಾಯವಾಗಿದೆ ಎಂದು ಎನ್ನಲಾಗಿದೆ.ಇದನ್ನು ತಡೆಯಲು ಬಂದ ಆರತಿ ಅವರ ಮಗಳ ಮೇಲೆ ಕೂಡ ಹಲ್ಲೆ ನಡೆ‌ಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಾಳು ಆರತಿ ಅವರು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು,ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!