Thursday, May 16, 2024
Homeತಾಜಾ ಸುದ್ದಿ60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ

spot_img
- Advertisement -
- Advertisement -

ಬೆಂಗಳೂರು:  ಇಷ್ಟು ದಿನ ವೃದ್ಧಾಪ್ಯ ವೇತನ ಪಡೆಯುತ್ತಿರುವ ಹಿರಿಯ ನಾಗರಿಕರಿಗೆ ಅದನ್ನು ಪಡೆದುಕೊಳ್ಳೋದೇ ದೊಡ್ಡ ತಲೆನೋವಾಗಿತ್ತು. ಅದಕ್ಕಾಗಿ ಅಲೆದಾಡಬೇಕಾಗಿತ್ತು.ಆದ್ರೀಗ ಹಿರಿಯ ನಾಗರಿಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.

ಹೌದು…ಇನ್ಮುಂದೆ 60 ವರ್ಷ ತುಂಬಿದ ಹಿರಿಯ ನಾಗರಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಟ ನಡೆಸಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ, ವೃದ್ಧಾಪ್ಯ ವೇತನ ತಲುಪಿಸಲು ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಇನ್ಮುಂದೆ ಆಯಾ ಜಿಲ್ಲಾಡಳಿತದ ಬಳಿ ಎಲ್ಲರ ಆಧಾರ್ ಕಾರ್ಡ್ ವಿವರವಿದ್ದು, 60 ವರ್ಷ ತುಂಬಿದ ತಕ್ಷಣ ಅಧಿಕಾರಿಗಳೇ ಮನೆಗೆ ಪತ್ರ ಕಳುಹಿಸಲಿದ್ದಾರೆ. ಯಾವ ಗ್ರಾಮದಲ್ಲಿ 60 ವರ್ಷ ತುಂಬಿದವರು ನೆಲೆಸಿದ್ದಾರೆ. ಅವರ ಆರ್ಥಿಕ ಪರಿಸ್ಥಿತಿ ಗುರುತಿಸಿ ವೃದ್ಧಾಪ್ಯ ವೇತನ ತಲುಪಿಸಲಾಗುವುದು ಎಂದರು ಹೇಳಿದ್ದಾರೆ.

ಅಧಿಕಾರಿಗಳು ಮನೆಗೆ ಪತ್ರ ಕಳುಹಿಸಿದ ಬಳಿಕ ವೃದ್ಧರು ತಮ್ಮ ಬ್ಯಾಂಕ್ ಖಾತೆಯ ವಿವರ ತಲುಪಿಸದರೆ ಸಾಕು. ವೃದ್ಧರ ಖಾತೆಗೆ ನೇರವಾಗಿ ವೃದ್ಧಾಪ್ಯ ವೇತನ ಜಮೆ ಮಾಡಲಾಗುವುದು ಎಂದು ಆರ್. ಅಶೋಕ್ ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!