Thursday, June 4, 2026
Homeಕರಾವಳಿಬಂಟ್ವಾಳ; ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಕಳ್ಳರು

ಬಂಟ್ವಾಳ; ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಕಳ್ಳರು

- Advertisement -
- Advertisement -

ಬಂಟ್ವಾಳ; ಮನೆಗೆ ನುಗ್ಗಿ ಕಳ್ಳರು ಚಿನ್ನಾಭರಣ ದೋಚಿದ ಘಟನೆ ಬಂಟ್ವಾಳದ ಇರಾದಲ್ಲಿ ನಡೆದಿದೆ.ಇರಾ ನಿವಾಸಿ ಅಬ್ದುಲ್‌ ಹಮೀದ್‌ ಅವರು ಆ. 26ರ ರಾತ್ರಿ 9.30ರ ಸುಮಾರಿಗೆ ಮನೆಗೆ ಬೀಗ ಹಾಕಿ ಅತ್ತೆ ಮನೆಗೆ ತೆರಳಿದ್ದರು. ಭಾನುವಾರ ಬೆಳಗ್ಗೆ ಹಮೀದ್‌ ಅವರು ಪುತ್ರನೊಂದಿಗೆ ಮನೆಗೆ ಆಗಮಿಸಿದಾಗ ಹಿಂಬಾಗಿಲು ತೆರೆದಿತ್ತು. ಕಳ್ಳರು ಬಾಗಿಲನ್ನು ಮುರಿದು ಒಳ ನುಗ್ಗಿದ್ದಾರೆ ಎನ್ನಲಾಗಿದೆ.

ಆ ಬಳಿಕ ಮನೆಯನ್ನು ಪರಿಶೀಲಿಸಿದಾಗ ಮಲಗುವ ಕೋಣೆಯ ಕಪಾಟಿನಲ್ಲಿಟ್ಟಿದ್ದ 1.12 ಲಕ್ಷ ರೂ. ಮೌಲ್ಯದ 4 ಪವನ್‌ ತೂಕದ ಚಿನ್ನದ ನೆಕ್ಲೇಸ್‌ ಹಾಗೂ 11 ಸಾವಿರ ರೂ. ನಗದನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.ಘಟನೆಯ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!