Thursday, June 4, 2026
Homeಅಪರಾಧಬುರ್ಕಾದಲ್ಲಿ‌ ಚಿನ್ನದ ಮಣಿ‌ ಪೋಣಿಸಿ‌ ಸಾಗಾಟ: ವಿಮಾನ ನಿಲ್ದಾಣದಲ್ಲಿ ಮಹಿಳೆಯ ಬಂಧನ

ಬುರ್ಕಾದಲ್ಲಿ‌ ಚಿನ್ನದ ಮಣಿ‌ ಪೋಣಿಸಿ‌ ಸಾಗಾಟ: ವಿಮಾನ ನಿಲ್ದಾಣದಲ್ಲಿ ಮಹಿಳೆಯ ಬಂಧನ

- Advertisement -
- Advertisement -

ಹೈದರಾಬಾದ್: ಬುರ್ಕಾದಲ್ಲಿ ಚಿನ್ನದ ಮಣಿ ಪೋಣಿಸಿ ದುಬೈನಿಂದ ಅಕ್ರಮವಾಗಿ ಚಿನ್ನ  ಸಾಗಾಟ ಮಾಡಿದ ಪ್ರಕರಣಕ್ಕೆ  ಸಂಬಂಧಪಟ್ಟ  ಹೈದರಾಬಾದ್  ವಿಮಾನ ನಿಲ್ದಾಣದಲ್ಲಿ ಮಹಿಳೆಯನ್ನು  ಪೊಲೀಸರು ಬಂಧಿಸಿದ್ದಾರೆ.

ಅಕ್ರಮವಾಗಿ ದುಬೈನಿಂದ 18 ಲಕ್ಷ ರೂ. ಮೌಲ್ಯದ ಚಿನ್ನ ಸಾಗಿಸಿ ತಂದ ಮಹಿಳೆಯನ್ನು ಏರ್ ಪೋರ್ಟ್ ಅಧಿಕಾರಿಗಳು ಬಂಧಿಸಿದ್ದಾರೆ.

ಆಕೆಯ ಬುರ್ಕಾದಲ್ಲಿ ಸುಮಾರು 350 ಗ್ರಾಂ ಚಿನ್ನವಿತ್ತು. ಆಕೆಯನ್ನು ವಶಕ್ಕೆ ಪಡೆದುಕೊಂಡ ಅಧಿಕಾರಿಗಳು ಪ್ರಕರಣಕ್ಕೆ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!