Friday, June 5, 2026
Homeಕರಾವಳಿದುಬೈನಿಂದ ಚಿನ್ನ ಸಾಗಿಸಲು ಖದೀಮರು ಅನುಸರಿಸುತ್ತಿದ್ದಾರೆ ದಿನಕ್ಕೊಂದು ದಾರಿ: ಮಂಗಳೂರಿನಲ್ಲಿ ಟ್ರಾಲಿ ಬ್ಯಾಗ್ ಚಕ್ರದಲ್ಲಿ ಚಿನ್ನ...

ದುಬೈನಿಂದ ಚಿನ್ನ ಸಾಗಿಸಲು ಖದೀಮರು ಅನುಸರಿಸುತ್ತಿದ್ದಾರೆ ದಿನಕ್ಕೊಂದು ದಾರಿ: ಮಂಗಳೂರಿನಲ್ಲಿ ಟ್ರಾಲಿ ಬ್ಯಾಗ್ ಚಕ್ರದಲ್ಲಿ ಚಿನ್ನ ಸಾಗಿಸುತ್ತಿದ್ದವರು ಅಂದರ್

- Advertisement -
- Advertisement -

ಮಂಗಳೂರು: ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸಿ ಸಿಕ್ಕಿ ಬೀಳುತ್ತಿರುವ ಪ್ರಕರಣಗಳು ಮಂಗಳೂರಿನಲ್ಲಿ ಇತ್ತೀಚೆಗೆ ದಿನಕ್ಕೆ ಒಂದರಂತೆ ವರದಿಯಾಗುತ್ತಲೇ ಇದೆ. ಇದೀಗ ಟ್ರಾಲಿ ಬ್ಯಾಗ್ ನ ಚಕ್ರಗಳಲ್ಲಿ ಹಾಗೂ ವ್ಯಾಕ್ಯೂಮ್ ಕ್ಲೀನರ್ ನ ಪ್ಲೇಟ್ ಗಳಲ್ಲಿ ಪಾದರಸ ಲೇಪಿತ ಚಿನ್ನವನ್ನು ಸಾಗಿಸುತ್ತಿದ್ದವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ನಿನ್ನೆ ದುಬೈನಿಂದ ಬಂದ ಕಾಸರಗೋಡು ನಿವಾಸಿ ಶೇಕ್ ಹನೀಫ್ ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದಾಗ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಟ್ರಾಲಿ ಬ್ಯಾಗ್ ನ ಚಕ್ರಗಳಲ್ಲಿ ಮತ್ತು ವ್ಯಾಕ್ಯೂಮ್ ಕ್ಲೀನರ್ ನ ಪ್ಲೇಟ್ ಗಳಲ್ಲಿ ಪಾದರಸ ಲೇಪಿತ ಚಿನ್ನವನ್ನು ಸಾಗಾಟ ಮಾಡಲಾಗುತ್ತಿತ್ತು. 19,01,460 ರೂ ಮೌಲ್ಯದ 402 ಗ್ರಾಮ್ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

ಎರಡು ದಿನಗಳ ಹಿಂದೆ ಸ್ಯಾನಿಟರಿ ನ್ಯಾಪ್ಕಿನ್ ಮತ್ತು ಪೌಚ್ ಗಳಲ್ಲಿ ಚಿನ್ನದ ಪುಡಿಯನ್ನು ಗಮ್ ನಲ್ಲಿ ಮಿಶ್ರಣ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆ ಮಾಡಲಾಗಿತ್ತು. ಚಿನ್ನವನ್ನು ಸಾಗಿಸಲು ದುಬೈನಿಂದ ಬರುವ ಪ್ರಯಾಣಿಕರು ನಾನಾ ತಂತ್ರಗಳನ್ನು ಅನುಸರಿಸುತ್ತಿರೋದು ಕಸ್ಟಮ್ಸ್ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

- Advertisement -

Latest News

error: Content is protected !!