Friday, June 5, 2026
Homeತಾಜಾ ಸುದ್ದಿದುಬೈನಿಂದ ಚಿನ್ನ ಸಾಗಿಸೋದಕ್ಕೆ ಈತ ಮಾಡಿದ ಪ್ಲ್ಯಾನ್ ಹೇಗಿದೆ ನೋಡಿ:ಅಷ್ಟಕ್ಕೂ ಈತ ಸಿಕ್ಕಿ ಬಿದ್ದಿದ್ದು ಹೇಗೆ...

ದುಬೈನಿಂದ ಚಿನ್ನ ಸಾಗಿಸೋದಕ್ಕೆ ಈತ ಮಾಡಿದ ಪ್ಲ್ಯಾನ್ ಹೇಗಿದೆ ನೋಡಿ:ಅಷ್ಟಕ್ಕೂ ಈತ ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ?

- Advertisement -
- Advertisement -

ಲಕ್ನೋ: ದುಬೈನಿಂದ ಜನ ಹೇಗೆಲ್ಲಾ ಚಿನ್ನ ಸಾಗಿಸ್ತಾರೆ ಅನ್ನೋದನ್ನು‌ ನೀವೆಲ್ಲಾ ಸಾಕಷ್ಟು ಬಾರಿ ಓದಿರ್ತೀರಾ. ಕೆಲವರು ಕುಕ್ಕರ್ ಒಳಗಿಟ್ಟು ಸಾಗಿಸಿದ್ರೆ, ಇನ್ನೂ ಕೆಲವರು ಗುದದ್ವಾರ ಹೀಗೆ ಇಡಬಾರದೆಲೆಲ್ಲಾ ಚಿನ್ನ ಇಟ್ಟು ಸಿಕ್ಕಿ‌ ಬಿದ್ದವರು ಹಲವರಿದ್ದಾರೆ. ಆದ್ರೆ ಇಲ್ಲೊಬ್ಬ ಮಾಸ್ಟರ್ ಪೀಸ್ ಚಿನ್ನ ಸಾಗಿಸೋದಕ್ಕೆ ಖರ್ತನಾಕ್ ಐಡಿಯಾ ಮಾಡಿ ಸಿಕ್ಕಿ ಬಿದ್ದಿದ್ದಾನೆ.

ಹೌದು..ಸೂಟ್ ಕೇಸ್ ಗೆ ಸಾಮಾನ್ಯ ಸ್ಕ್ರೂಗಳ ಬದಲಾಗಿ ಚಿನ್ನದ ಸ್ಕ್ರೂ ಹಾಕಿ ದುಬೈನಿಂದ ಬಂದಿದ್ದ ಪ್ರಯಾಣಿಕನನ್ನು ಲಕ್ನೋ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಎಫ್ ಝೆಜ್ 8325 ವಿಮಾನದಲ್ಲಿ ದುಬೈನಿಂದ ಲಕ್ನೋಗೆ ಬಂದಿಳಿದಿದ್ದನು. ಸೂಟ್‍ಕೇಸ್ ಕೆಳಭಾಗದಲ್ಲಿ ಸ್ಕ್ರೂ ಅಳವಡಿಸಿದ್ದರಿಂದ ಯಾರಿಗೂ ತಿಳಿಯಲ್ಲ ಅಂತ ಧೈರ್ಯವಾಗಿ ಬಂದಿಳಿದ ಪ್ರಯಾಣಿಕ ಕಸ್ಟಮ್ಸ್ ಅಧಿಕಾರಿಗಳ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಧಿಕಾರಿಗಳು ಬಂಧಿತನಿಂದ 180.50 ಗ್ರಾಂ ಚಿನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಅರೋಪಿ ತನ್ನ ಎರಡು ಟ್ರಾಲಿ  ಬ್ಯಾಗ್‍ಗಳಿಗೆ ಚಿನ್ನದಿಂದ ಮಾಡಿದ ಸ್ಕ್ರೂ ಹಾಕಿದ್ದನು. ಎರಡು ಬ್ಯಾಗ್ ಗಳಿಗೆ 46 ಸ್ಕ್ರೂ ಹಾಕಲಾಗಿತ್ತು. ಒಟ್ಟು 9 ಲಕ್ಷ 54 ಸಾವಿರ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Latest News

error: Content is protected !!