ನಿರಂತರ ಏರಿಕೆಯಿಂದಾಗಿ ಚಿನ್ನ, ಬೆಳ್ಳಿ ಬೆಲೆಯು ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದು, ಇಂದು ಪ್ರತೀ ಗ್ರಾಂ ಚಿನ್ನಕ್ಕೆ (24 ಕ್ಯಾರೆಟ್) 240 ರೂ. ಏರಿಕೆಯಾಗಿದ್ದು, ಒಟ್ಟಾರೆಯಾಗಿ 13,855 ರೂ.ಗೆ ತಲುಪಿದೆ. ನಿನ್ನೆ ಕೂಡ 197 ರೂ. ಏರಿಕೆಯಾಗಿತ್ತು.
22 ಕ್ಯಾರೆಟ್‍ನ ಚಿನ್ನ ಪ್ರತಿ ಗ್ರಾಂ.ಗೆ 220 ರೂ. ಏರಿಕೆಯಾಗಿದ್ದು, ಇಂದು 12,700 ರೂ.ಗೆ ತಲುಪಿದೆ.ಡಿಸೆಂಬರ್ ತಿಂಗಳ ಆರಂಭದಿಂದಲೂ ಏರಿಳಿತವಾಗುತ್ತಿದ್ದ ಚಿನ್ನದ ಧಾರಣೆ ಇಂದು ಸಾರ್ವಕಾಲಿಕ ದಾಖಲೆ ಬರೆದಿದೆ.
ಚಿನ್ನದಂತೆಯೇ ಬೆಳ್ಳಿ ಧಾರಣೆಯೂ ನಿರಂತರ ಬೆಲೆ ಏರಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 2 ಪಟ್ಟು ಹೆಚ್ಚಾಗಿದೆ. ಇಂದು ಪ್ರತೀ ಗ್ರಾಂ ಬೆಳ್ಳಿಗೆ 4 ರೂ. ಹೆಚ್ಚಳವಾಗಿದ್ದು, 223 ರೂ.ಗೆ ತಲುಪಿದೆ. ನಿನ್ನೆ ಕೂಡ 5 ರೂ.ನಷ್ಟು ಹೆಚ್ಚಳವಾಗಿತ್ತು.
ಚಿನ್ನದಂತೆಯೇ ಡಿಸೆಂಬರ್ ತಿಂಗಳ ಆರಂಭದಿಂದಲೂ ಏರಿಳಿತವಾಗುತ್ತಿದ್ದ ಬೆಳ್ಳಿಯ ಧಾರಣೆ ಈಗಾಗಲೇ ಪ್ರತೀ ಕೆಜಿಗೆ 2 ಲಕ್ಷ ರೂ. ಗಡಿ ದಾಟಿದ್ದು, ಪ್ರಸ್ತುತ 2,23,000 ರೂ.ಗೆ ತಲುಪಿದ್ದು, ಗ್ರಾಹಕರು ಹುಬ್ಬೆರಿಸುವಂತೆ ಮಾಡಿದೆ.


