Wednesday, June 3, 2026
Homeತಾಜಾ ಸುದ್ದಿಆಭರಣ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ಹಳದಿ ಲೋಹ: ಚಿನ್ನದ ದರದಲ್ಲಿ ಭಾರಿ ಇಳಿಕೆ

ಆಭರಣ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ಹಳದಿ ಲೋಹ: ಚಿನ್ನದ ದರದಲ್ಲಿ ಭಾರಿ ಇಳಿಕೆ

- Advertisement -
- Advertisement -

ನವದೆಹಲಿ: ಸಂಕ್ರಾತಿ ಹಬ್ಬಕ್ಕೆ ಆಭರಣ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಯಾಕಂದ್ರೆ. ಕಳೆದ ಎರಡು ದಿನಗಳಿಂದ ಸತತ ಇಳಿಕೆಯತ್ತಾ ಮುಖ ಮಾಡಿರುವ ಬಂಗಾರ ಇಂದು ಕೂಡ ದಾಖಲೆಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

ಭಾರತದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ತೀವ್ರ ಕುಸಿತ ಕಂಡಿದ್ದು, ಪ್ರತಿ 10 ಗ್ರಾಂ. ಚಿನ್ನದ ಬೆಲೆಯಲ್ಲಿ ₹2,000ಕ್ಕಿಂತಲೂ ಹೆಚ್ಚು ಕುಸಿತಗೊಂಡಿದೆ. ಅದ್ರಂತೆ, ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 4.1% ಅಥವಾ ₹2,086 ರಷ್ಟು ಇಳಿಕೆಯಾಗಿ 48,818 ರೂಪಾಯಿಗಳಾಗಿದೆ.

ಇನ್ನು  ಬೆಳ್ಳಿಯ ಬೆಲೆಯಲ್ಲೂ ದಾಖಲೆಯ ಕುಸಿತ ಸಂಭವಿಸಿದ್ದು, 8.7% ನಷ್ಟು ಅಂದ್ರೆ, 6,112 ರೂಪಾಯಿಗಳಷ್ಟು ಕುಸಿದು, ಪ್ರತಿ ಕೆಜಿ ಬೆಳ್ಳಿಯ ಬೆಲೆ ₹63,850 ಗಳಷ್ಟಾಗಿದೆ.

- Advertisement -

Latest News

error: Content is protected !!