Friday, June 5, 2026
Homeಕರಾವಳಿಮಂಗಳೂರು: ಜಿಮ್ ನಿಂದ ನಡೆದುಕೊಂಡು ಹೋಗುತ್ತಿದ್ದ ಯುವಕನ ಸರ ಕದ್ದು ಅಪರಿಚಿತ ಪರಾರಿ

ಮಂಗಳೂರು: ಜಿಮ್ ನಿಂದ ನಡೆದುಕೊಂಡು ಹೋಗುತ್ತಿದ್ದ ಯುವಕನ ಸರ ಕದ್ದು ಅಪರಿಚಿತ ಪರಾರಿ

- Advertisement -
- Advertisement -

ಮಂಗಳೂರು: ಜಿಮ್ ನಿಂದ ನಡೆದುಕೊಂಡು ಹೋಗುತ್ತಿದ್ದ ಯುವಕನ ಸರ ಕದ್ದು ಅಪರಿಚಿತ ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

 ನಗರದ ಕಾವೂರು ನಿವಾಸಿ ಹರ್ಷಿತ್‌ ರೈ ಅವರು ಶುಕ್ರವಾರ ಸಂಜೆ 5 ಗಂಟೆ ವೇಳೆ ಗಾಂಧಿನಗರದಲ್ಲಿರುವ ಜಿಮ್‌ಗೆ ಮನೆಯಿಂದ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನು ಎಳೆದು ಪರಾರಿಯಾಗಿದ್ದಾನೆ ಎನ್ನಲಾಗಿದೆ. 

ಸುಮಾರು 25-30 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಸ್ಕೂಟರ್‌ನಲ್ಲಿ ಬಂದು ಹಿಂಬದಿಯಿಂದ ಅವರ ಕುತ್ತಿಗೆಗೆ ಕೈ ಹಾಕಿ ಸುಮಾರು 16 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದಿದ್ದಾನೆ. 

ಈ ವೇಳೆ ಅವರು ಸರವನ್ನು ಹಿಡಿದಿದ್ದು, ಅರ್ಧ ಸರ ತುಂಡಾಗಿದೆ. ಸುಲಿಗೆಯಾದ ಚಿನ್ನದ ಸರದಲ್ಲಿ ಉಳಿದ ತುಂಡು ಸುಮಾರು 8 ಗ್ರಾಂ ಇದ್ದು, ಇನ್ನೊಂದು 8 ಗ್ರಾಂ ತೂಕದ ಸರ ಅಪರಿಚಿತನ ಕೈಯಲ್ಲಿ ಹೋಗಿದೆ. ಇದರ ಅಂದಾಜು ಮೌಲ್ಯ 50 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಆತ ಗೆರೆಗಳಿರುವ ಬಿಳಿ ಬಣ್ಣದ ಉದ್ದ ತೋಳಿನ ಶರ್ಟ್‌ ಹಾಗೂ ಸಿಮೆಂಟ್‌ ಬಣ್ಣದ ಜೀನ್ಸ್‌ ಪ್ಯಾಂಟ್‌ ಧರಿಸಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

- Advertisement -

Latest News

error: Content is protected !!