Friday, April 26, 2024
Homeಕರಾವಳಿಉಡುಪಿಕಾರ್ಕಳ: ಮನೆಗೆ ನುಗ್ಗಿದ ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು

ಕಾರ್ಕಳ: ಮನೆಗೆ ನುಗ್ಗಿದ ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು

spot_img
- Advertisement -
- Advertisement -

ಕಾರ್ಕಳ: ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು ಮಾಡಿರುವ ಘಟನೆ ನಂದಳಿಕೆ ಗ್ರಾಮದ ಮೂಡು ಮನೆ ಎಂಬಲ್ಲಿ ನಡೆದಿದೆ.

ಸುಧಾಕರ ರಾವ್ ಎಂಬವರ ಮನೆಗೆ ನುಗ್ಗಿದ ಕಳ್ಳರು, ಕಪಾಟಿನಲ್ಲಿಟ್ಟಿದ್ದ 2 ಕರಿಮಣಿ ಸರ, ನಕ್ಲೇಸ್, ಮುತ್ತಿನ ಸರ, 3 ಕಿವಿ ಓಲೆ, 2 ಉಂಗುರ, ಚೈನು, ಮಕ್ಕಳ ಚೈನು, ಬಳೆ, ಆಧಾರ್ ಕಾರ್ಡ್, ಪಾನ್‌ಕಾರ್ಡ್ ಹಾಗೂ ಸುಮಾರು 3000 ನಗದು ರೂ.

ನಗದು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೊತ್ತ 5ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!