Thursday, April 25, 2024
Homeಕರಾವಳಿಪಾಂಡವರಕಲ್ಲು ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಕಿಡಿಗೇಡಿಗಳ ದುಷ್ಕೃತ್ಯ: ಗರಡಿಯ ಅಂಗಳದಲ್ಲಿ ಗಾಜಿನ ಚೂರು...

ಪಾಂಡವರಕಲ್ಲು ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಕಿಡಿಗೇಡಿಗಳ ದುಷ್ಕೃತ್ಯ: ಗರಡಿಯ ಅಂಗಳದಲ್ಲಿ ಗಾಜಿನ ಚೂರು ಎಸೆದ ದುಷ್ಕರ್ಮಿಗಳು

spot_img
- Advertisement -
- Advertisement -

ಬಂಟ್ವಾಳ:  ಕೊರಗಜ್ಜನ ಸನ್ನಿಧಾನದಲ್ಲಿ ಕಿಡಿಗೇಡಿಗಲು ದುಷ್ಕೃತ್ಯ ಎಸಗಿದ ಪ್ರಕರಣಗಳು ಮಾಸುವ ಮುನ್ನವೇ ಮತ್ತೊಂದು ಇಂತಹದ್ದೇ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ  ಬಡಗಕಜೆಕಾರು ಗ್ರಾ.ಪಂ. ವ್ಯಾಪ್ತಿಯ ಪಾಂಡವರಕಲ್ಲು ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ಅಂಗಳದಲ್ಲಿ ದುಷ್ಕರ್ಮಿಗಳು ಗಾಜಿನ ಬಾಟಲ್ ಒಡೆದು, ಗಾಜಿನ ಚೂರುಗಳನ್ನು ಹಾಕಿದ್ದಾರೆ. ನಿನ್ನೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮೇ 14 ರಂದು ರಾತ್ರಿ ಸಾರ್ವಜನಿಕರ ಗಮನಕ್ಕೆ ಬಂದಿದ್ದು,ಕಿಡಿಗೇಡಿಗಳ ಈ ದುಷ್ಕೃತ್ಯವನ್ನು ಖಂಡಿಸಿದ್ದಾರೆ. ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ಪಾಂಡವರಕಲ್ಲು ಗರಡಿ ಕ್ಷೇತ್ರ ಪುರಾತನ ಇತಿಹಾಸವುಳ್ಳ ಕ್ಷೇತ್ರವಾಗಿದೆ. ಇದು ಹಿಂದೂ ಧರ್ಮಿಯರ ಮಾತ್ರವಲ್ಲದೆ ಅನ್ಯಧರ್ಮಿಯರ ನಂಬಿಕೆಯ ಕ್ಷೇತ್ರವಾಗಿದೆ. ಇಲ್ಲಿನ ಕಾರಣಿಕ ಕೇವಲ ಬಾಯಿ ಮಾತಿನಲ್ಲಿ ಮಾತ್ರವಲ್ಲದೆ ಇದನ್ನು ಕಣ್ಣಾರೆ ಕಂಡ ಅನೇಕ ಸಾಕ್ಷಿಗಳಿವೆ.

ಇಂತಹ ಕಾರಣಿಕದ ಕ್ಷೇತ್ರದೊಳಗೆ ಶ್ರೀ ಕೊಡಮಣಿತ್ತಾಯ , ಶ್ರೀ ಪಿಲಿಚಾಮುಂಡಿ ಮತ್ತು ಬ್ರಹ್ಮಬೈದೆರ್ಕಳ ದೈವಸ್ಥಾನವಿದ್ದು ಅದರ ಸುತ್ತಲೂ ಕಿಡಿಗೇಡಿಗಳು ಸುಮಾರು 20ಕ್ಕೂಅಧಿಕ ಗಾಜಿನ ಬಾಟಲಿಗಳನ್ನು ಚೂರು‍ಚೂರಾಗುವಂತೆ ಒಡೆದು ಹಾಕಿ ಗರಡಿಯೊಳಗೆ ಯಾರಿಗೂ ನಡೆದಾಡದಂತೆ ಮಾಡಿದ್ದಾರೆ. ಕೂಡಲೇ ತಪ್ಪಿಸ್ಥರನ್ನು ಬಂಧಿಸಬೇಕು ಅಂತಾ ಭಕ್ತರು ಆಗ್ರಹಿಸಿದ್ದಾರೆ.

- Advertisement -
spot_img

Latest News

error: Content is protected !!