Saturday, June 6, 2026
Homeಕರಾವಳಿಕೊಡಗಿಗೆ ಅನ್ಯಕೋಮಿನ ಯುವಕರೊಂದಿಗೆ ಪ್ರವಾಸಕ್ಕೆ ಬಂದ ಮಂಗಳೂರಿನ ಯುವತಿಯರು: ಯುವಕರಿಗೆ ಗುಂಪೊಂದರಿಂದ ಹಲ್ಲೆ

ಕೊಡಗಿಗೆ ಅನ್ಯಕೋಮಿನ ಯುವಕರೊಂದಿಗೆ ಪ್ರವಾಸಕ್ಕೆ ಬಂದ ಮಂಗಳೂರಿನ ಯುವತಿಯರು: ಯುವಕರಿಗೆ ಗುಂಪೊಂದರಿಂದ ಹಲ್ಲೆ

- Advertisement -
- Advertisement -

ಮಡಿಕೇರಿ: ಇಲ್ಲಿನ ಪ್ರವಾಸಿತಾಣ ಮಾಂದಲ್‌ಪಟ್ಟಿಗೆ ಪ್ರವಾಸಕ್ಕೆಂದು ಮಂಗಳೂರಿನಿಂದ ಇಬ್ಬರು ಯುವತಿಯರೊಂದಿಗೆ ಬಂದಿದ್ದ ಮೂವರು ಯುವಕರಿಗೆ ಗುಂಪೊಂದು ಹಲ್ಲೆ ನಡೆಸಿದೆ.

‘ನಂದಕಿಶನ್, ಸಮನ್‌ ಸಾಜಿದ್, ಸಂಶೀರ್‌ ಎಂಬ ಯುವಕರು ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾಡ್ಮಿಂಟನ್ ಕ್ಲಬ್‌ವೊಂದರ ಸದಸ್ಯರಾಗಿದ್ದು, ಅದೇ ಕ್ಲಬ್‌ನ ಇಬ್ಬರು ಸದಸ್ಯೆಯರೊಂದಿಗೆ ಇಲ್ಲಿ ಪ್ರವಾಸಕ್ಕಾಗಿ ಬಂದಿದ್ದರು.

ಅಬ್ಬಿ ಫಾಲ್ಸ್‌ ವೀಕ್ಷಿಸಿ ಮಾಂದಲ್‌ ಪಟ್ಟಿಗೆ ತೆರಳಿದಾಗ ಮೊದಲಿಗೆ 5 ಜನರು ವಿನಾಕಾರಣ ಯುವಕರ ಮೇಲೆ ಹಲ್ಲೆ ನಡೆಸಿದರು. ನಂತರ, ಗುಂಪೊಂದು ಸುತ್ತುವರೆಯಿತು. ಅಷ್ಟರಲ್ಲಿ ಪೊಲೀಸರು ಸ್ಥಳಕ್ಕೆ ತೆರಳುತ್ತಿದ್ದಂತೆ ಎಲ್ಲರೂ ಪರಾರಿಯಾಗಿದ್ದಾರೆ. ಹಲ್ಲೆ ನಡೆಸಿದವರ ಹುಡುಕಾಟ ನಡೆಯುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಯುವತಿಯರು ನಾವು ಮನೆಯವರ ಅನುಮತಿ ಪಡೆದೇ ಬಂದಿದ್ದೇವೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ  ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!