Monday, April 29, 2024
Homeತಾಜಾ ಸುದ್ದಿಬೆಳ್ತಂಗಡಿ : ಜೀವನ್ಮರಣ ಹೋರಾಟದೊಂದಿಗೆ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಸಾವು

ಬೆಳ್ತಂಗಡಿ : ಜೀವನ್ಮರಣ ಹೋರಾಟದೊಂದಿಗೆ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಸಾವು

spot_img
- Advertisement -
- Advertisement -

ಬೆಳ್ತಂಗಡಿ : ಪಡಂಗಡಿ ಗ್ರಾಮದ ಬದ್ಯಾರ್ ನಿವಾಸಿ ವಿಲಿಯಂ ಹಾಗೂ ಅನಿತಾ ಡಿಸಿಲ್ವ ಅವರ ಮಗಳು ಏಂಜಲ್ ಅನುಷಾ ಡಿಸಿಲ್ವ (11) ಇಂದು ಬೆಳಗ್ಗೆ ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಇಂದು ನಿಧನರಾದರು . ವಾರದ ಹಿಂದೆ ಏಕಾಏಕಿ ಅನಾರೋಗ್ಯಕ್ಕೀಡಾದ ಬಾಲಕಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅರಸಿನ ಕಾಮಾಲೆ ಕಾಯಿಲೆಯಿಂದ ಬಾಲಕಿಯ ಲಿವರ್ ಜರ್ಝರಿತಗೊಂಡಿದ್ದು , ಲಿವರ್ ಕಸಿ ಮಾಡಲು ಸೋಮವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಾಲಕಿ ಏಂಜಲ್ ಅನುಷಾ ಡಿಸಿಲ್ವ ಬೆಳ್ತಂಗಡಿ ಚರ್ಚ್ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು , ಪಠ್ಯ ಹಾಗೂ ಪಠ್ಯತೇರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು.

- Advertisement -
spot_img

Latest News

error: Content is protected !!