Thursday, April 25, 2024
Homeಕರಾವಳಿಬೆಳ್ತಂಗಡಿ:ಉಜಿರೆಯಲ್ಲಿ ಪೆಟ್ರೋಲ್ ಪಂಪ್ ನಲ್ಲಿ ಕೆಲಸಕ್ಕಿದ್ದ ಯುವತಿ ನಾಪತ್ತೆ

ಬೆಳ್ತಂಗಡಿ:ಉಜಿರೆಯಲ್ಲಿ ಪೆಟ್ರೋಲ್ ಪಂಪ್ ನಲ್ಲಿ ಕೆಲಸಕ್ಕಿದ್ದ ಯುವತಿ ನಾಪತ್ತೆ

spot_img
- Advertisement -
- Advertisement -

 ಬೆಳ್ತಂಗಡಿ : ಪೆಟ್ರೋಲ್ ಪಂಪ್ ನಲ್ಲಿ ಕೆಲಸಕ್ಕೆಂದು ಹೋದ  ಯುವತಿಯೊಬ್ಬಳು ವಾಪಾಸ್ ಮನೆಗೆ ಬರದೇ ನಾಪತ್ತೆಯಾದ ಘಟನೆ ಉಜಿರೆಯಲ್ಲಿ ನಡೆದಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಉಜಿರೆ ಗ್ರಾಮದ ಮುಂಡತ್ತೋಡಿ ನಿವಾಸಿ ಶೀನ ಅವರ ಪುತ್ರಿ ಪ್ರಮೀಳಾ (18) ನಾಪತ್ತೆಯಾದ ಯುವತಿ.

ಪ್ರಮೀಳಾ ಎಂದಿನಂತೆ ನವೆಂಬರ್ 21 ರಂದು ಉಜಿರೆ ಹೆಚ್ ಪಿ ಪೆಟ್ರೋಲ್ ಪಂಪ್ ನಲ್ಲಿ ಕೆಲಸಕ್ಕೆಂದು ತೆರಳಿದ್ದಾಳೆ. ಬೆಳಿಗ್ಗೆ 07:00 ಗಂಟೆಗೆ ಮನೆಯಿಂದ ಹೋಗಿದ್ದು, ಬಳಿಕ ಕೆಲಸಕ್ಕೂ ಹೋಗದೇ ಮನೆಗೂ, ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾಳೆ ಎನ್ನಲಾಗಿದೆ .

ಕನ್ನಡ, ತುಳು ಮಾತನಾಡುವ ಈಕೆ ಮನೆಯಿಂದ ಹೋಗುವ ವೇಳೆ ಆಕಾಶ ನೀಲಿ ಬಣ್ಣದ ಟಾಪ್ ಮತ್ತು ಕೆಂಪು ಬಣ್ಣದ ಲೆಗ್ಗಿನ್ಸ್ ಪ್ಯಾಂಟ್ ಧರಿಸಿದ್ದಳು ಎನ್ನಲಾಗಿದೆ.ಈಕೆ ಎಲ್ಲಿಯಾದರೂ ಕಂಡುಬಂದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ (08256232093) ತಿಳಿಸುವಂತೆ ಪೋಲಿಸರು ಪ್ರಕಟಣೆ ಹೊರಡಿಸಿದ್ದಾರೆ.

- Advertisement -
spot_img

Latest News

error: Content is protected !!