Thursday, July 16, 2026
Homeಕರಾವಳಿಮಂಗಳೂರುಮಂಗಳೂರು: ಇನ್ಸ್ಟಾ ಜಾಹೀರಾತು ನಂಬಿ 4 ಲಕ್ಷ ಕಳೆದುಕೊಂಡ ಯುವತಿ

ಮಂಗಳೂರು: ಇನ್ಸ್ಟಾ ಜಾಹೀರಾತು ನಂಬಿ 4 ಲಕ್ಷ ಕಳೆದುಕೊಂಡ ಯುವತಿ

- Advertisement -
- Advertisement -

ಮಂಗಳೂರು: ಇನ್ಸ್ಟಾ ಜಾಹೀರಾತು ನಂಬಿ ಯುವತಿಯೊಬ್ಬಳು 4.09 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಪುತ್ತೂರಿನ ಬನ್ನೂರಿನಲ್ಲಿ ನಡೆದಿದೆ.

ಈ ಕುರಿತು ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬನ್ನೂರಿನ ಬೆಂಗಳೂರಿನ ಕಂಪನಿಯೊಂದರಲ್ಲಿ ಯುವತಿ ಕೆಲಸ ಮಾಡುತ್ತಿದ್ದು, ಮಾ.1 ರಂದು ಇನ್‌ಸ್ಟಾಗ್ರಾಂ ಖಾತೆಯಿಂದ ಟಾಸ್ಕ್‌ ಮಾಡಲು ಯುಪಿಐಐಡಿಗೆ 10 ಸಾವಿರ ರೂ. ಕಳುಹಿಸುವಂತೆ ತಿಳಿಸಿದ್ದು, ಇದನ್ನು ಆಕೆ ಫೋನ್‌ ಪೇ ಮೂಲಕ ಮಾಡಿದ್ದಾರೆ. ನಂತರ ಇದೇ ರೀತಿ ಯುವತಿಗೆ ಮತ್ತೆ 10 ಸಾವಿರ ಹಾಕಿದರೆ 2 ಲಕ್ಷ ರೂ. ಗಳಿಸಬಹುದು ಎಂದು ಸಂದೇಶ ಬಂದಿತ್ತು. ಅನಂತರ ಯುವತಿ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿದ್ದು, ಬರೋಬ್ಬರಿ 4,90,997 ಪಾವತಿ ಮಾಡಿದ್ದರು
ಆದರೆ ಯುವತಿಯ ಖಾತೆಗೆ ಹಣ ಬಾರದೆ ವಂಚನೆ ಮಾಡಿರುವುದು ಅರಿವಿಗೆ ಬಂದ ನಂತರ ಮಂಗಳೂರು ಸೆನ್‌ ಅಪರಾಧ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದಾರೆ.

- Advertisement -

Latest News

error: Content is protected !!