Wednesday, June 3, 2026
Homeಅಪರಾಧ3ನೇ ತರಗತಿ ಬಾಲಕಿ ಮೇಲೆ 13, 14 ವರ್ಷದ ಬಾಲಕರಿಂದ ಸಾಮೂಹಿಕ ಅತ್ಯಾಚಾರ; ಕೊಲೆ ಮಾಡಿ...

3ನೇ ತರಗತಿ ಬಾಲಕಿ ಮೇಲೆ 13, 14 ವರ್ಷದ ಬಾಲಕರಿಂದ ಸಾಮೂಹಿಕ ಅತ್ಯಾಚಾರ; ಕೊಲೆ ಮಾಡಿ ಕಾಲುವೆಗೆ ಎಸೆದ ಬಾಲಕರು

- Advertisement -
- Advertisement -

8 ವರ್ಷದ ಬಾಲಕಿ ಮೇಲೆ ಹನ್ನೆರಡು, ಹದಿಮೂರು ವರ್ಷದ ಬಾಲಕರು ಸೇರಿ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿ, ಕಾಲುವೆಗೆ ಎಸೆದಿರುವ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ನಂದ್ಯಾಲ್​ ಜಿಲ್ಲೆಯಲ್ಲಿ ನಡೆದಿದೆ.

3ನೇ ತರಗತಿಯಲ್ಲಿ ಬಾಲಕಿಯು ಓದುತ್ತಿದ್ದಳು. ಒಬ್ಬ ಬಾಲಕ 6ನೇ ತರಗತಿ ಹಾಗೂ ಇನ್ನೊಬ್ಬ ಬಾಲಕ 7ನೇ ತರಗತಿಯಲ್ಲಿ ಓದುತ್ತಿದ್ದ. ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಒಂದೇ ಶಾಲೆಯ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ. 

ಬಾಲಕಿಯ ತಂದೆ ಮುಚ್ಚುಮರ್ರಿ ಪಾರ್ಕ್​ನಲ್ಲಿ ಆಟವಾಡುತ್ತಿದ್ದ ಮಗಳು ನಾಪತ್ತೆಯಾಗಿದ್ದಾಳೆ ಎಂದು ಭಾನುವಾರ ದೂರು ದಾಖಲಿಸಿದ್ದರು. ಮುಚ್ಚುಮರ್ರಿ ಪಾರ್ಕ್​ನಲ್ಲಿ ಪೊಲೀಸರು, ಪೋಷಕರೆಲ್ಲರೂ ಹುಡುಕಾಟ ನಡೆಸಿದ್ದರು, ಆದರೂ ಬಾಲಕಿಯನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಬಳಿಕ ಸ್ನಿಫರ್​ ಡಾಗ್​ನ್ನು ಕರೆದುಕೊಂಡು ಬರಲಾಯಿತು. ನಾಯಿಯ ಸುಳಿವು ಪೊಲೀಸರನ್ನು ಮೂವರು ಅಪ್ರಾಪ್ತ ಬಾಲಕರ ನಿವಾಸಗಳಿಗೆ ಕರೆದೊಯ್ಯಿತು.

ಇನ್ನು ಹುಡುಗರನ್ನು ಪ್ರಾಥಮಿಕ ತನಿಖೆಯ ನಂತರ ಬಂಧಿಸಲಾಯಿತು. ವಿಚಾರಣೆ ವೇಳೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದಾಗಿ ಬಾಲಕರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅವರ ಹೇಳಿಕೆ ಪ್ರಕಾರ ಮುಚ್ಚುಮರ್ರಿ ಪಾರ್ಕ್ ಬಳಿ ಆಟವಾಡುತ್ತಿದ್ದ ಬಾಲಕಿಯನ್ನು ಹುಡುಗರು ಗಮನಿಸಿದ್ದಾರೆ. ಅವರು ಅವಳನ್ನು ಆಟಕ್ಕೆ ಸೇರಲು ಕೇಳಿದರು ಮತ್ತು ಆಕೆ ಒಪ್ಪಿಕೊಂಡಳು.ನಂತರ ಆಕೆಯನ್ನು ಮುಚ್ಚುಮರ್ರಿ ಏತ ನೀರಾವರಿ ಯೋಜನೆ ಬಳಿಯ ಏಕಾಂತ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಬಾಲಕಿಯು ತನ್ನ ಪೋಷಕರಿಗೆ ತನ್ನ ಮೇಲಿನ ದೌರ್ಜನ್ಯದ ಬಗ್ಗೆ ತಿಳಿಸಿದರೆ ಪರಿಣಾಮ ಬೀರಬಹುದೆಂಬ ಭಯದಿಂದ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದಾರೆ. ಬಳಿಕ ಆಕೆಯ ಶವವನ್ನು ಸಮೀಪದ ಕಾಲುವೆಯಲ್ಲಿ ವಿಲೇವಾರಿ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.

- Advertisement -

Latest News

error: Content is protected !!