Saturday, December 7, 2024
Homeಕರಾವಳಿಮಂಗಳೂರು; ಮುಲ್ಕಿ ಸಮೀಪ ಬೈಕ್ ಮತ್ತು ಕಾರು ನಡುವೆ ಅಪಘಾತದಲ್ಲಿ ಯುವತಿ ಮೃತ್ಯು

ಮಂಗಳೂರು; ಮುಲ್ಕಿ ಸಮೀಪ ಬೈಕ್ ಮತ್ತು ಕಾರು ನಡುವೆ ಅಪಘಾತದಲ್ಲಿ ಯುವತಿ ಮೃತ್ಯು

spot_img
- Advertisement -
- Advertisement -

ಮಂಗಳೂರು: ಬೈಕ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಯುವತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮುಲ್ಕಿ ಸಮೀಪ ರಾಷ್ಟ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಕಾಸರಗೋಡು ಜಿಲ್ಲೆಯ ಬಾಕ್ರಬೈಲು ನಿವಾಸಿ ಪ್ರೀತಿಕಾ ಶೆಟ್ಟಿ (21) ಅಪಘಾತದಲ್ಲಿ ಮೃತ ಪಟ್ಟ ಯುವತಿಯಾಗಿದ್ದು, ಬೈಕ್​ ಸವಾರ ಬಂಟ್ವಾಳ ಮೂಲದ ಮನ್ವಿತ್​ ರಾಜ್​ ಗೆ ಗಾಯಗೊಂಡಿದ್ದಾರೆ.

ಉಡುಪಿಯಿಂದ ಮಂಗಳೂರಿನತ್ತ ಬರುತ್ತಿದ್ದ ವೇಳೆ ಹೆದ್ದಾರಿ ದಾಟುತ್ತಿದ್ದ ಕಾರು ವೇಗದಲ್ಲಿ ಚಲಿಸುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆದಿತ್ತು.ಡಿಕ್ಕಿ ಹೊಡೆದ ರಭಸಕ್ಕೆ ಆಯ ತಪ್ಪಿ ಬಿದ್ದ ಯುವತಿ ತಲೆಗೆ ಗಂಭೀರ ಗಾಯಗಾಳಾಗಿ ಆಸ್ಪತ್ರೆಗೆ ಕೊಂಡೊಯ್ಯುವ ಮೊದಲೇ ಮೃತಪಟ್ಟಿದ್ದಾರೆ.

ಮುಲ್ಕಿ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!