- Advertisement -
- Advertisement -
ಚಿಕ್ಕಮಗಳೂರು ; ನಿನ್ನೆ ಬರ್ತಡೇ ಆಚರಿಸಿಕೊಂಡಾಕೆ ಇಂದು ನೇಣಿಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹಳುವಳ್ಳಿ ತಾರಿಕೊಂಡದಲ್ಲಿ ನಡೆದಿದೆ. ಹಳುವಳ್ಳಿ ತಾರಿಕೊಂಡ ನಿವಾಸಿ ರಮ್ಯಾ(21) ಸಾವನ್ನಪ್ಪಿದ ವಿದ್ಯಾರ್ಥಿನಿ.
ಇನ್ನು ನಿನ್ನೆ ರಮ್ಯಾ ಖುಷಿ ಖುಷಿಯಾಗಿ ಮನೆಯಲ್ಲಿ ತನ್ನ ಬರ್ತಡೇ ಆಚರಿಸಿಕೊಂಡಿದ್ದಳು. ಆದರೆ ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ರಮ್ಯಾ ಇಂದು ಸಾವಿಗೆ ಶರಣಾಗಿದ್ದಾಳೆ. ಈಕೆ ಕಳಸ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ.
ಇಂದು ರಮ್ಯಾ ಮನೆಯವರು ಮದುವೆ ಕಾರ್ಯಕ್ರಮಕ್ಕೆ ಅಂತಾ ಹೊರಗಡೆ ಹೋಗಿದ್ರು.ಪೋಷಕರು ಹೊರಗಡೆ ಹೋದ ಸಂದರ್ಭದಲ್ಲಿ ರಮ್ಯಾ ನೇಣುಬಿಗಿದುಕೊಂಡಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
- Advertisement -