Thursday, June 4, 2026
Homeಕರಾವಳಿಬೆಳ್ತಂಗಡಿ : ಕಾಣೆಯಾಗಿದ್ದ ಗಂಗಾಧರ ಗೌಡ ಗೃಹಸಚಿವರ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ: ಕಾರ್ಯಕರ್ತರಿಂದ ಗಂಗಾಧರ ಗೌಡರಿಗೆ ಘೇರಾವ್

ಬೆಳ್ತಂಗಡಿ : ಕಾಣೆಯಾಗಿದ್ದ ಗಂಗಾಧರ ಗೌಡ ಗೃಹಸಚಿವರ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ: ಕಾರ್ಯಕರ್ತರಿಂದ ಗಂಗಾಧರ ಗೌಡರಿಗೆ ಘೇರಾವ್

- Advertisement -
- Advertisement -

ಬೆಳ್ತಂಗಡಿ : ಚುನಾವಣಾ ಅಭ್ಯರ್ಥಿ ಘೋಷಣೆ ಬಳಿಕ ಬೆಳ್ತಂಗಡಿ ರಾಜಕೀಯದಲ್ಲಿ ಕಾಣೆಯಾಗಿದ್ದ ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರ ಗೌಡರವರು ಜೂನ್.6 ರಂದು ಸಂಜೆ ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಗೃಹಸಚಿವ ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತ್ಯಕ್ಷವಾಗಿದ್ದು‌, ಈ ವೇಳೆ ಗಂಗಾಧರ ಗೌಡರಿಗೆ ಸಭೆಯಿಂದ ಹೊರನಡೆಯಲು ಕಾರ್ಯಕರ್ತರು ಘೇರಾವ್ ಹಾಕಿರುವ ಘಟನೆ ನಡೆದಿದೆ.

ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣವಾದವರನ್ನು ವೇದಿಕೆಗೆ ಹತ್ತಿಸಿದ್ದೀರಿ. ವಿಧಾನಸಭೆ ಚುನಾವಣೆ ಘೋಷಣೆ ಆದ ನಂತರ ಇಂದಿನವರೆಗೂ ಸಭೆ , ಪಕ್ಷದ ಪ್ರಚಾರದಲ್ಲಿ ಹಾಗೂ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸದವರು ಇಂದು ಗೃಹಸಚಿವರ ಕಾರ್ಯಕ್ರಮದಲ್ಲಿ ಯಾವ ಮುಖ ಇಟ್ಟುಕೊಂಡು ವೇದಿಕೆ ಹತ್ತುತ್ತಾರೆ ಎಂದು ಬೊಬ್ಬೆ ಹಾಕಿ ಗಂಗಾಧರ ಗೌಡರಿಗೆ ಘೇರಾವ್ ಹಾಕಿದ್ರು.  ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರ ಮಗ ಅಭಿನಂದನ್ ಹರೀಶ್ ಕುಮಾರ್ ಅವರು ಕಾರ್ಯಕರ್ತರನ್ನು ಸಮಾಧಾನ ಮಾಡಿದ್ರು.. ನಂತರ ತಪ್ಪು ಯಾರೇ ಮಾಡಿದ್ದರು ಪಕ್ಷದ ನಾಯಕರು ಶಿಸ್ತು ಕ್ರಮ ಗೈಗೊಳ್ಳುತ್ತಾರೆ ಎಂದು ವಿವರಿಸಿದ ಬಳಿಕ ಕಾರ್ಯಕ್ರಮ ಮುಂದುವರಿಸಿದ್ದಾರೆ.

 ಗೃಹಸಚಿವರ ಜಿ.ಪರಮೇಶ್ವರ್, ಮಾಜಿ ಸಚಿವ ರಾಮನಾಥ ರೈ, ಪುತ್ತೂರು ಶಾಸಕ ಅಶೋಕ್ ರೈ, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ , ಮಿಥುನ್ ರೈ ,ರಕ್ಷಿತ್ ಶಿವರಾಂ, ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರ್ ಗೌಡ ಸೇರಿ ಮುಂತಾದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

- Advertisement -

Latest News

error: Content is protected !!