Friday, May 17, 2024
Homeಕರಾವಳಿಸುಳ್ಯ; ನೀವು ಮನೆಯ ಹೊರಗಡೆ ಸಿಲಿಂಡರ್ ಇಡ್ತೀರಾ?; ಹಾಗಾದ್ರೆ ಈ ಸುದ್ದಿಯನ್ನು ಮಿಸ್ ಮಾಡದೇ ಓದಿ;...

ಸುಳ್ಯ; ನೀವು ಮನೆಯ ಹೊರಗಡೆ ಸಿಲಿಂಡರ್ ಇಡ್ತೀರಾ?; ಹಾಗಾದ್ರೆ ಈ ಸುದ್ದಿಯನ್ನು ಮಿಸ್ ಮಾಡದೇ ಓದಿ; ಮನೆಯ ಹೊರಗಿಟ್ಟ ಗ್ಯಾಸ್ ಸಿಲಿಂಡರನ್ನೇ ಹೊತ್ತೊಯ್ದ ಕಳ್ಳ

spot_img
- Advertisement -
- Advertisement -

ಸುಳ್ಯ; ನೀವು ಮನೆಯ ಹೊರಗಡೆ ಸಿಲಿಂಡರ್ ಇಡ್ತೀರಾ ಹಾಗಾದ್ರೆ ಈ ಸುದ್ದಿಯನ್ನು ಮಿಸ್ ಮಾಡದೇ ಓದಿ ಯಾಕಂದ್ರೆ ಈಗ ನೀವು ಮನೆಯ ಹೊರಗಟ್ಟೆ ಇಟ್ಟ ಗ್ಯಾಸ್ ಸಿಲಿಂಡರ್ ಕೂಡ ಸೇಫ್ ಅಲ್ಲ. ಮನೆಯ ಹೊರಗಿಟ್ಟ ಗ್ಯಾಸ್ ಸಿಲಿಂಡರನ್ನೇ ಕಳ್ಳನೊಬ್ಬ ಹೊತ್ತೊಯ್ದ ಘಟನೆ ಸುಳ್ಯದ ಜಯನಗರದಲ್ಲಿ ನಡೆದಿದೆ.

ಜಯನಗರ ನಿವಾಸಿಯೊಬ್ಬರ  ಮನೆಯ ಹಿಂಬದಿಯಲ್ಲಿ ಗ್ಯಾಸ್‌ ಒಲೆಗೆ ಅಳವಡಿಸಲಾಗಿದ್ದ ಗ್ಯಾಸ್‌ ತುಂಬಿದ್ದ ಸಿಲಿಂಡರ್‌ ಇರಿಸಿದ್ದರು.ಮನೆಯಲ್ಲಿ ಮಹಿಳೆ ಮತ್ತು ಮಕ್ಕಳು ಮಾತ್ರ ಇದ್ದು ಅವರು ಮನೆಯ ಒಳಗೆ ಇದ್ದಾಗಲೇ ಕಳ್ಳ ಇಂಡೇನ್‌ ಕಂಪೆನಿಯ ಸಿಲಿಂಡರನ್ನು ಇರಿಸಿ ನೂತನ ಎಚ್‌ಪಿ ಕಂಪೆನಿಯ ಸಿಲಿಂಡರನ್ನು ಹೊತ್ತು ಪರಾರಿಯಾಗಿದ್ದಾನೆ.

ರಾತ್ರಿ ಮನೆಯವರು ಗ್ಯಾಸ್‌ ಸ್ಟವ್‌ ಉರಿಸುವ ಸಂದರ್ಭ ಒಲೆ ಉರಿಯದ ಕಾರಣ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.ಘಟನೆಯಿಂದ ಸುತ್ತಮುತ್ತಲಿನ ಜನ ಆತಂಕಕೊಂಡಿದ್ದು ಗ್ಯಾಸ್ ಸಿಲಿಂಡರ್ ನ್ನು ಬಿಡಲ್ಲ ಅಂದ್ರೆ ಏನ್ ಮಾಡೋದು ಅಂತಾ ತಲೆಕೆಡಿಸಿಕೊಂಡಿದ್ದಾರೆ.

Bottom of Form

- Advertisement -
spot_img

Latest News

error: Content is protected !!