Thursday, June 4, 2026
Homeಕರಾವಳಿಪುಷ್ಪ ಸಿನಿಮಾ ಸ್ಟೈಲ್ ನಲ್ಲಿ ವಾಹನವನ್ನ ವಿನ್ಯಾಸಗೊಳಿಸಿ  ಗಾಂಜಾ ಸಪ್ಲೈ: ದಕ್ಷಿಣಕನ್ನಡ ಜಿಲ್ಲೆಯ ಇಬ್ಬರು ಸೇರಿ...

ಪುಷ್ಪ ಸಿನಿಮಾ ಸ್ಟೈಲ್ ನಲ್ಲಿ ವಾಹನವನ್ನ ವಿನ್ಯಾಸಗೊಳಿಸಿ  ಗಾಂಜಾ ಸಪ್ಲೈ: ದಕ್ಷಿಣಕನ್ನಡ ಜಿಲ್ಲೆಯ ಇಬ್ಬರು ಸೇರಿ 7 ಮಂದಿಯ ಬಂಧನ

- Advertisement -
- Advertisement -

ಬೆಂಗಳೂರು: ಪುಷ್ಪ ಸಿನಿಮಾ ಸ್ಟೈಲ್ ನಲ್ಲಿ ವಾಹನವನ್ನ ವಿನ್ಯಾಸಗೊಳಿಸಿ ಗಾಂಜಾ ಸಪ್ಲೈ‌ ಮಾಡುತ್ತಿದ್ದ ದಕ್ಷಿಣಕನ್ನಡ ಜಿಲ್ಲೆಯ ಇಬ್ಬರು ಸೇರಿ 7 ಮಂದಿಯನ್ನು ಬಂಧಿಸಲಾಗಿದೆ. ಬೇಗೂರು ಠಾಣಾ ಪೊಲೀಸರು ಏಳು ಆರೋಪಿಗಳನ್ನು  ಅರೆಸ್ಟ್ ಮಾಡಿದ್ದಾರೆ.

ಅರವಿಂದ, ಪವನ್, ಅಮ್ಜದ್ ಇತಿಯಾರ್, ಪ್ರಭು, ನಜೀಮ್,ಪ್ರಸಾದ್ ಹಾಗೂ ಪತ್ತಿ ಸಾಯಿಚಂದ್ರ ಪ್ರಕಾಶ್ ಬಂಧಿತ ಆರೋಪಿಗಳು.

ಬಂಧಿತರಿಂದ ಸರಿಸುಮಾರು 1 ಕೋಟಿ ಮೌಲ್ಯದ 175 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ವಿಶಾಖಪಟ್ಟಣಂನಿಂದ ಬೆಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದರು. ಗಾಂಜಾ ಸಾಗಿಸಲು ಅನುಕೂಲವಾಗುವಂತೆ ಬೊಲೆರೋ ಪಿಕಪ್ ವಾಹನವನ್ನು  ಮಾರ್ಪಾಡು ಮಾಡಿಕೊಂಡಿದ್ದರು.

ಆರೋಪಿಗಳ ಪೈಕಿ ನಜೀಂ ಮಂಗಳೂರಿನಲ್ಲಿ ರೌಡಿಶೀಟರ್ ಆಗಿದ್ದು ಸದ್ಯ ಬಾಡಿ ವಾರೆಂಟ್ ಮೂಲಕ ಕೋಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೋರ್ವ ಆರೋಪಿ ಅಮ್ಜದ್ ಕೂಡ ದಕ್ಷಿಣಕನ್ನಡದವನಾಗಿದ್ದಾನೆ. 

- Advertisement -

Latest News

error: Content is protected !!