Tuesday, May 14, 2024
Homeಪ್ರಮುಖ-ಸುದ್ದಿನಿಜಾಮಾಬಾದ್ ನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

ನಿಜಾಮಾಬಾದ್ ನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

spot_img
- Advertisement -
- Advertisement -

ಹೈದರಾಬಾದ್ : ಹಣ ನೀಡುವ ನೆಪದಲ್ಲಿ 26 ವರ್ಷದ ಯುವತಿ ಮೇಲೆ ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ ಆರು ಮಂದಿ ಅತ್ಯಾಚಾರ ಎಸಗಿರುವ ಘಟನೆ ಇಲ್ಲಿನ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಯುವತಿಯು ತನ್ನ ಸಹೋದರಿಯ ಚಿಕಿತ್ಸೆಗಾಗಿ ನಿಜಾಮಾಬಾದ್​​ಗೆ ಬಂದಿದ್ದಳು. ಹಣ ಹೊಂದಿಸುವ ತೊಳಲಾಟದಲ್ಲಿದ್ದ ಯುವತಿಗೆ ಆ. 24 ರ ಮಧ್ಯರಾತ್ರಿ ಯಾರೋ ಕೆಲವರು ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಅವರು ಕರೆದ ಸ್ಥಳಕ್ಕೆ ತೆರಳಿದ್ದಳು. ಅಲ್ಲಿ ಆಕೆಯ ಮೇಲೆ ಇಬ್ಬರು ಅಪ್ರಾಪ್ತರು ಸೇರಿದಂತೆ ಆರು ಮಂದಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಗಳವಾರ ಮುಂಜಾನೆ 1.30ರ ಸುಮಾರಿಗೆ ಪೊಲೀಸರ ಗಸ್ತು ತಂಡ ಆ ಗುಂಪನ್ನು ಗುರುತಿಸಿದ ವೇಳೆ ಪೊಲೀಸರನ್ನು ನೋಡಿದ ದುರುಳರು ಸ್ಥಳದಿಂದ ಪರಾರಿಯಾಗಿದ್ದರು. ಆದರೆ, ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ದ್ಯ ಆಕೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ವರನ್ನು ಬಂಧಿಸಿ, ಇಬ್ಬರು ಅಪ್ರಾಪ್ತ ಬಾಲಕರನ್ನು ಬಾಲಾಪರಾಧಿ ಸೆಲ್​ಗೆ ಕಳುಹಿಸಲಾಗಿದೆ

- Advertisement -
spot_img

Latest News

error: Content is protected !!