Saturday, June 6, 2026
Homeಕರಾವಳಿಮಂಗಳೂರುವಿಟ್ಲ: ಬಟ್ಟೆ ಅಂಗಡಿ ನುಗ್ಗಿ ಬಟ್ಟೆ ಹಾಗೂ ಇತರೆ ವಸ್ತುಗಳನ್ನು ದೋಚಿದ ಗ್ಯಾಂಗ್

ವಿಟ್ಲ: ಬಟ್ಟೆ ಅಂಗಡಿ ನುಗ್ಗಿ ಬಟ್ಟೆ ಹಾಗೂ ಇತರೆ ವಸ್ತುಗಳನ್ನು ದೋಚಿದ ಗ್ಯಾಂಗ್

- Advertisement -
- Advertisement -

ವಿಟ್ಲ: ನವೀನ್ ಕುಂಪಲ ಮತ್ತು ಇತರ ಮೂರು ಮಂದಿಯ ಗ್ಯಾಂಗ್ ಬಟ್ಟೆ ಅಂಗಡಿಗೆ ನುಗ್ಗಿ  ಅಂಗಡಿಯಲ್ಲಿದ್ದ ಬಟ್ಟೆ ಹಾಗೂ ಇತರೆ ವಸ್ತುಗಳನ್ನು ದೋಚಿದ ಘಟನೆ ವಿಟ್ಲ ಶಾಲಾ ರಸ್ತೆ ಬಳಿ ನಡೆದಿದೆ.

ಮಾರ್ಚ್ 18 ರಂದು ಮಧ್ಯಾಹ್ನ ವೇಳೆ ಘಟನೆ ನಡೆದಿದೆ. ಏಕಾಏಕಿ ಬಟ್ಟೆ ಅಂಗಡಿಗೆ ಅಕ್ರಮ ಪ್ರವೇಶಿಸಿದ ನಾಲ್ಕು ಮಂದಿಯ ತಂಡ, ಅಂಗಡಿಯಲ್ಲಿದ್ದ ವಸ್ತುಗಳನ್ನು ಹಾಗೂ ಬಟ್ಟೆಯನ್ನು ತಮ್ಮಬ್ಯಾಗಿನೊಳಗೆ ತುಂಬಿಸಿ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾಗ ಮಹಿಳಾ ಸಿಬ್ಬಂದಿಯು ಯಾಕೆ ಬಟ್ಟೆಗಳನ್ನು ತುಂಬಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಆರೋಪಿಗಳು “ನಿನಗೆ ಎಷ್ಟು ಕೆಲಸವಿದೆಯೋ ಅಷ್ಟೇ ಮಾಡು, ನಮ್ಮಸುದ್ದಿಗೆ ಬಂದ್ರೆ ಜಾಗ್ರತೆ” ಎಂದು ಬೆದರಿಸಿ ಬಲಾತ್ಕಾರದಿಂದ ಬಟ್ಟೆ ಮತ್ತು ವಸ್ತುಗಳನ್ನು ಕೊಂಡೊಯ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ.ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ .

- Advertisement -

Latest News

error: Content is protected !!