- Advertisement -
- Advertisement -
ಮೈಸೂರು: ಮೈಸೂರು ದಸರಾ ಮಹೋತ್ಸವಕ್ಕೆ ನಾಳೆ ಗಜ ಪಯಣ ಆರಂಭವಾಗಲಿದೆ.
ಹುಣಸೂರು ತಾಲೂಕಿನ ವೀರನ ಹೊಸಹಳ್ಳಿಯಲ್ಲಿ ಗಜ ಪಯಣ ಕಾರ್ಯಕ್ರಮ ನಡೆಯಲಿದ್ದು,ಅಭಿಮನ್ಯು ನೇತೃತ್ವದ ಗಜಪಡೆಗೆ ಪೂಜೆ ನಡೆಯಲಿದೆ. ಮೊದಲ ಹಂತದಲ್ಲಿ ಮೈಸೂರಿಗೆ 9 ಆನೆಗಳು ಬರಲಿವೆ.
ಅಂಬಾರಿ ಹೊರುವ ಅಭಿಮನ್ಯು ನೇತೃತ್ವದ ಮೊದಲ ತಂಡದಲ್ಲಿ ಅರ್ಜುನ, ಭೀಮ, ಧನಂಜಯ, ಗೋಪಿ, ಮಹೇಂದ್ರ, ಪಾರ್ಥಸಾರಥಿ, ವಿಜಯ ಹಾಗೂ ವರಲಕ್ಷ್ಮಿ ಆನೆಗಳು ಮೈಸೂರಿಗೆ ಬರಲಿವೆ.
ನಾಳೆ ಬೆಳಗ್ಗೆ 9.45 ರಿಂದ 10.15ರ ತುಲಾ ಲಗ್ನದಲ್ಲಿ ಗಜಪಡೆಗೆ ಪೂಜೆ ನಡೆಯಲಿದ್ದು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಗಜ ಪಯಣಕ್ಕೆ ಚಾಲನೆ ನೀಡಲಿದ್ದು, ಅರಣ್ಯ ಸಚಿವ ಈಶ್ವರ ಖಂಡ್ರೆ ಪಾಲ್ಗೊಳ್ಳಲಿದ್ದಾರೆ.
- Advertisement -