Monday, June 8, 2026
Homeಉದ್ಯಮಸತತ 13 ನೇ ದಿನವೂ ದರ ಹೆಚ್ಚಳ ಶಾಕ್ - ಕೈ ಸುಡಲು ಶುರುವಾಗಿದೆ ಪೆಟ್ರೋಲ್,...

ಸತತ 13 ನೇ ದಿನವೂ ದರ ಹೆಚ್ಚಳ ಶಾಕ್ – ಕೈ ಸುಡಲು ಶುರುವಾಗಿದೆ ಪೆಟ್ರೋಲ್, ಡೀಸೆಲ್ ಬೆಲೆ..

- Advertisement -
- Advertisement -

ನವದೆಹಲಿ: ಸತತ 13 ನೇ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಇವತ್ತು ಪೆಟ್ರೋಲ್ ಲೀಟರ್ ಗೆ 56 ಪೈಸೆ ಹಾಗೂ ಡೀಸೆಲ್ ಲೀಟರ್ ಗೆ 63 ಪೈಸೆಯಷ್ಟು ಹೆಚ್ಚಳವಾಗಿದೆ.

ಲಾಕ್ಡೌನ್ ಸಡಿಲವಾದ ನಂತರ ತೈಲ ದರ ದೈನಂದಿನ ಪರಿಷ್ಕರಣೆಯಾಗುತ್ತಿದ್ದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ 13 ದಿನಗಳಿಂದ ನಿರಂತರವಾಗಿ ಏರಿಕೆಯಾಗುತ್ತಿದೆ. ಇಂದು ಪೆಟ್ರೋಲ್ 56 ಪೈಸೆ ಹಾಗೂ ಡೀಸೆಲ್ 63 ಪೈಸೆ ಹೆಚ್ಚಳವಾಗಿದೆ. 13 ದಿನದ ಅವಧಿಯಲ್ಲಿ ಪೆಟ್ರೋಲ್ ಲೀಟರ್ ಗೆ 7.11 ರೂಪಾಯಿ ಹಾಗೂ ಡೀಸೆಲ್ ಲೀಟರ್ಗೆ 7.76 ರೂಪಾಯಿಯಷ್ಟು ಹೆಚ್ಚಳವಾಗಿದೆ.

ಮಾರ್ಚ್‌ ಮಧ್ಯಭಾಗದಲ್ಲಿ ಕೇಂದ್ರ ಸರಕಾರ ತೈಲದ ಆಮದಿನ ಮೇಲೆ ಅಬಕಾರಿ ಸುಂಕ ಹೆಚ್ಚಿಸಿತ್ತು. ಕೋವಿಡ್ ಗೆ ಹಣ ಸಂಗ್ರಹಿಸಲು ಈ ಕ್ರಮ ಅನಿವಾರ್ಯವಾಗಿತ್ತು.

ಆದರೆ ಆಗ ಕಚ್ಚಾತೈಲ ಬೆಲೆ ಬಹಳ ಕಡಿಮೆಯಿದ್ದಿದ್ದರಿಂದ, ಅದನ್ನು ತೈಲ ಕಂಪನಿಗಳು ಗ್ರಾಹಕರ ಮೇಲೆ ಹೇರಿರಲಿಲ್ಲ. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಬೆಲೆಯೇರಿಕೆ ಆರಂಭವಾಗಿದೆ. ಆದ್ದರಿಂದ ಸರಕಾರ ಹೆಚ್ಚಿ ಸಿರುವ ಸುಂಕವನ್ನು ಜನರಿಗೆ ತೈಲಕಂಪನಿಗಳು ವರ್ಗಾಯಿಸಲು ಆರಂಭ ಮಾಡಿವೆ.

- Advertisement -

Latest News

error: Content is protected !!