Thursday, June 4, 2026
Homeಕರಾವಳಿಮಂಗಳೂರುಕಡಬ: ಏಕಾಏಕಿ ಫ್ರಿಡ್ಜ್ ಸ್ಫೋಟ; ಮನೆಯಲ್ಲಿದ್ದ ಯಂತ್ರೋಪಕರಣ ಸೇರಿ ಹಲವು ವಸ್ತುಗಳು ಸುಟ್ಟು ಕರಕಲು

ಕಡಬ: ಏಕಾಏಕಿ ಫ್ರಿಡ್ಜ್ ಸ್ಫೋಟ; ಮನೆಯಲ್ಲಿದ್ದ ಯಂತ್ರೋಪಕರಣ ಸೇರಿ ಹಲವು ವಸ್ತುಗಳು ಸುಟ್ಟು ಕರಕಲು

- Advertisement -
- Advertisement -

ಕಡಬ:  ಏಕಾಏಕಿ ಫ್ರಿಡ್ಜ್ ಸ್ಫೋಟವಾಗಿ ಮನೆಯಲ್ಲಿದ್ದ ಯಂತ್ರೋಪಕರಣ ಸೇರಿ ಹಲವು ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಕಡಬದ ಅಡ್ಡಗದ್ದೆ ಅಂಗನವಾಡಿ ಬಳಿ ನಡೆದಿದೆ.

ಇಲ್ಲಿನ ಫಾರೂಕ್ ಎಂಬವರ ಮನೆಯಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಯಲ್ಲಿದ್ದ ಫ್ರಿಡ್ಜ್ ಏಕಾಏಕಿ ಸ್ಫೋಟವಾಗಿದೆ. ಪರಿಣಾಮ ಮನೆಯಲ್ಲಿದ್ದ ವಿದ್ಯುತ್ ಉಪಕರಣ ಸೇರಿದಂತೆ ಮನೆಯ ದಾಖಲೆ ಪತ್ರಗಳು ಸುಟ್ಟು ಹೋಗಿವೆ,

ಘಟನೆ ವೇಳೆ ಫಾರೂಕ್ ಅವರ ಪತ್ನಿ ಹಾಗೂ ಮಕ್ಕಳು ಮದುವೆಯೊಂದಕ್ಕೆ ತೆರಳಿದ್ದರು. ಫಾರೂಕ್ ತಹಶೀಲ್ದಾರ್ ಕಚೇರಿ ಬಳಿ ಇರುವ ತನ್ನ ಅಂಗಡಿಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಅವಘಡ ಸಂಭವಿಸಿದ್ದು ದೊಡ್ಡ ದುರಂತವೊಂದು ತಪ್ಪಿದೆ.

ಸುಮಾರು ಐದು ವರ್ಷಗಳ ಹಿಂದೆ ಅವರು ರೆಫ್ರಿಜರೇಟರ್ ಖರೀದಿಸಿದ್ದರು. ಎಂದಿನಂತೆ ರೆಫ್ರಿಜರೇಟರ್ ಆನ್  ಮಾಡಿದ್ದರು.ಮನೆಯ ಸುತ್ತ ಹೊಗೆ ಕಾಣಿಸಿಕೊಂಡ ಹಿನ್ನಲೆ‌ ಸ್ಥಳೀಯರು ಸಂಶಯಗೊಂಡು ನೋಡಿದಾಗ ಬೆಂಕಿ ಉರಿಯುತ್ತಿರುವುದು ಕಂಡು ಬಂದಿದೆ. ಸ್ಥಳೀಯರು ಬೆಂಕಿ ನಂದಿಸಲು ಸಹರಿಸಿದ್ದಾರೆ.

- Advertisement -

Latest News

error: Content is protected !!