Sunday, February 16, 2025
Homeಕರಾವಳಿಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಹಾಗೂ ಉನ್ನತೀಕರಣ ಕಾಮಗಾರಿಗಳಿಗೆ ಶಿಲಾನ್ಯಾಸ

ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಹಾಗೂ ಉನ್ನತೀಕರಣ ಕಾಮಗಾರಿಗಳಿಗೆ ಶಿಲಾನ್ಯಾಸ

spot_img
- Advertisement -
- Advertisement -

ಬೆಳ್ತಂಗಡಿ:  ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಶೀಘ್ರವಾಗಿ ಹೆಚ್ಚಿಸುವ ಪ್ರಯತ್ನವನ್ನು  ಕೈಗೊಳ್ಳಬೇಕು.ಎಲ್ಲಾ ಸೌಕರ್ಯಗಳಿದ್ದರು ಹೆರಿಗೆ ಪ್ರಮಾಣ ಯಾಕೇ ಕಡಿಮೆಯೆಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಆಸ್ಪತ್ರೆಯ ವೈದ್ಯಾಧಿಕಾರಿಯವರನ್ನು ಪ್ರಶ್ನಿಸಿದರು.

ಅವರು ಜ.18 ರಂದು ಬಿ.ಪಿ.ಹೆಚ್ ಲ್ಯಾಬ್ ಮತ್ತು 12 ಬೆಡ್ ಗಳ ಐಸೋಲೇಶನ್ ವಾರ್ಡ್ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ರೋಗಿಗಳಿಗೆ ಅವಶ್ಯಕವಿರುವ ಔಷಧಗಳನ್ನು ಪೂರ್ಣ ಪ್ರಮಾಣದಲ್ಲಿ ದೊರೆಯುವಂತೆ ಕ್ರಮವಹಿಸಬೇಕು.ರೋಗಿಗಳನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡಬೇಕೆಂದರು.

ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಹಾಗೂ ಉನ್ನತೀಕರಣ ಕಾಮಗಾರಿಗಳ ಶಿಲಾನ್ಯಾಸವನ್ನು ಶಾಸಕ ಹರೀಶ್ ಪೂಂಜ ನೇರವೇರಿಸಿದರು.ಈ‌ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್,ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಕಾಶಿಪಟ್ಣ, ನಾಗೇಶ್ ಗೌಡ,ಪಟ್ಟಣ ಪಂಚಾಯತ್ ಸದಸ್ಯ ಶರತ್ ಶೆಟ್ಟಿ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಅಪರ ಸರಕಾರಿ ವಕೀಲ  ಮನೋಹರ್ ಇಳಂತಿಳ,ಜಿ.ಪಂ ಮಾಜಿ ಸದಸ್ಯರಾದ ಶೇಖರ್ ಕುಕ್ಕೇಡಿ,ನಮಿತಾ,ಕೆಡಿಪಿ ಸದಸ್ಯ  ಸಂತೋಷ್ ಕುಮಾರ್ ಬೆಳ್ತಂಗಡಿ, ಪ್ರಮುಖರಾದ ಉಷಾ ಶರತ್, ಕುಶಾಲಪ್ಪ ಗೌಡ,ಜೆಸಿಂತಾ ಮೋನಿಸ್,ಯಶೋಧ ಕುತ್ಲೂರು,ಅಕ್ಬರ್ ಬೆಳ್ತಂಗಡಿ, ವಸಂತ ಬಿಕೆ,ಪುನೀತ್ ಮಾಲಾಡಿ,ಪ್ರಶಾಂತ್ ಮಚ್ಚಿನ,ಈಶ್ವರ ಭಟ್,ಜಯವಿಕ್ರಮ್ ಕಲ್ಲಾಪು,ನಿತೀಶ್ ಕುಕ್ಕೇಡಿ,ಮೋಹನ್ ಶೆಟ್ಟಿಗಾರ್,ಕೇರಿಮಾರ್ ಬಾಲಕೃಷ್ಣ ಗೌಡ,ಸುಭಾಶ್ಚಂದ್ರ ರೈ ಅಳದಂಗಡಿ,ಸಂಜೀವ ಪೂಜಾರಿ ಕೊಡಂಗೆ,ಭಗೀರಥ ಜಿ,ಸೌಮ್ಯ ಲಾಯಿಲ,ವನಿತಾ,ಸವಿತಾ,ಜಿನತ್,ಗುಣವತಿ,ಮರೀನಾ ಪಿಂಟೋ,ಮಧುರ, ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!