Wednesday, June 24, 2026
Homeಕರಾವಳಿಉಡುಪಿನಾಳೆ ಮಂಗಳೂರಿನಲ್ಲಿ ಆಧುನಿಕ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಕಟ್ಟಡಕ್ಕೆ ಶಿಲಾನ್ಯಾಸ

ನಾಳೆ ಮಂಗಳೂರಿನಲ್ಲಿ ಆಧುನಿಕ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಕಟ್ಟಡಕ್ಕೆ ಶಿಲಾನ್ಯಾಸ

- Advertisement -
- Advertisement -

ನಾಳೆ ಮಂಗಳೂರಿನಲ್ಲಿ ಆಧುನಿಕ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಕಟ್ಟಡಕ್ಕೆ ಶಿಲಾನ್ಯಾಸ ಮಂಗಳೂರು: ಶೀಘ್ರದಲ್ಲೇ ಮಂಗಳೂರಿನಲ್ಲಿ ಆಧುನಿಕ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ತಲೆ ಎತ್ತಲಿದೆ. ಮಾರುಕಟ್ಟೆ ಕಟ್ಟಡಕ್ಕೆ ನಾಳೆ ಶಂಕು ಸ್ಥಾಪನೆ ನಡೆಯಲಿದ್ದು, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಶಿಲಾನ್ಯಾಸ ನಡೆಸಲಿದ್ದಾರೆ. ಬೈಕಂಪಾಡಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಶಂಕುಸ್ಥಾಪನೆ ‌ನಡೆಯಲಿದ್ದು, ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.

ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದ ಬಳಿಕ ಸಚಿವ ಎಸ್.ಟಿ. ಸೋಮಶೇಖರ್ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಲ್ಲಿ ನಡೆಯುವ 2021-22ನೇ ಸಾಲಿನ ವಿವಿಧ ಸಾಲ ವಿತರಣಾ ‌ಕಾರ್ಯಕ್ರಮ ರೈತ ಸ್ಪಂದನಾ ದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಲಿರುವ ‌ಸಚಿವ ಸೋಮಶೇಖರ್ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ‌. ಇದರ ಜೊತೆಗೆ ನಾಳೆ ಸಂಜೆ ಆರ್ ಎಸ್ ಎಸ್ ಕಚೇರಿ ಸಂಘ ನಿಕೇತನಕ್ಕೂ ಸಹಕಾರ ಸಚಿವರ ಭೇಟಿ ನಿಗದಿಯಾಗಿದೆ.

- Advertisement -

Latest News

error: Content is protected !!