Sunday, May 5, 2024
Homeಕರಾವಳಿ'ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸಿ; ಇಲ್ಲವೇ ಕ್ರೈಸ್ತರ ಹೋರಾಟವನ್ನು ಎದುರಿಸಿ'

‘ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸಿ; ಇಲ್ಲವೇ ಕ್ರೈಸ್ತರ ಹೋರಾಟವನ್ನು ಎದುರಿಸಿ’

spot_img
- Advertisement -
- Advertisement -

ಮಂಗಳೂರು: ರಾಜ್ಯದ ಲ್ಲಿ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ರಚನೆ ಮಾಡುವ ನಿರ್ಧಾರವನ್ನು ತಕ್ಷಣ ಪುನರ್ ಪರಿಶೀಲಿಸಿ ಕಾರ್ಯ ಗತಗೊಳಿಸಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ವಕ್ತಾರ ಐವನ್ ಡಿ ಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ರಾಜ್ಯದ 27 ಜಿಲ್ಲೆಗಳಲ್ಲಿ ಸುಮಾರು 30ಲಕ್ಷ ಕ್ರೈಸ್ತರಿದ್ದಾರೆ. ರಾಜ್ಯದಲ್ಲಿ ಕ್ರೈಸ್ತರಲ್ಲಿಯೂ ಸಾಕಷ್ಟು ಬಡ ಜನರಿದ್ದಾರೆ, ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಮ್ಮ ಒತ್ತಾಯವಿತ್ತು. ಆದರೆ ಸರಕಾರ ನಮ್ಮ ಮನವಿಗೆ ಸರಿಯಾಗಿ ಸ್ಪಂದಿಸಿಲ್ಲ. ರಾಜ್ಯದ ಕ್ರೈಸ್ತರನ್ನ ಹೋರಾಟಕ್ಕೆ ಧುಮುಕುವಂತೆ ಮಾಡುವೆವು, ಜನರು ಬೀದಿಗೆ ಬಂದರೆ ಸರಕಾರವೇ ನೇರ ಹೊಣೆ. ಹೀಗಾಗಿ ಕ್ರೈಸ್ತರನ್ನ ಯಾವತ್ತೂ ಲಘುವಾಗಿ ಪರಿಗಣಿಸಬೇಡಿ. ಕ್ರೈಸ್ತ ಸಮುದಾಯದ ಮೌನ, ಅವರ ವೀಕ್ನೆಸ್ ಅಲ್ಲ ಎಂದು ಗುಡುಗಿದ್ದಾರೆ.

ಅಂದು ಬಿಷಪ್ ಸನ್ಮಾನ ಸ್ವೀಕರಿಸಿದ ಸಿಎಂ ಇದಕ್ಕೆ ಅನುಮೋದನೆ ನೀಡುವುದಾಗಿ ಹೇಳಿದ್ರು. ಆದರೆ ಆನಂತರ ಯಾಕಾಗಿ ರದ್ದು ಮಾಡಿದ್ದೀರಿ? ತಕ್ಷಣವೇ ಸಿಎಂ ಇದಕ್ಕೆ ಉತ್ತರ ಕೊಡಬೇಕು. ಜೊತೆಗೆ 55 ಕೋಟಿ ನಿಗಮಕ್ಕಾಗಿ ಇಟ್ಟಿದ್ದು ಏನು ಮಾಡಿದ್ದೀರಿ? ನಿಗಮದ ಸ್ಥಾಪನೆಗೆ ನಿಗದಿಯಾದ ಹಣವನ್ನು ಬಿಡುಗಡೆ ಮಾಡದೆ ರಾಜ್ಯದ ಸರಕಾರ ಕ್ರೈಸ್ತ ಸಮುದಾಯಕ್ಕೆ ಅನ್ಯಾಯ ಎಸಗಿದೆ.ಬಜೆಟ್ ನಲ್ಲಿ ಮೀಸಲಿಟ್ಟ ಹಣವನ್ನು ಸಮರ್ಪಕವಾಗಿ ವಿನಿಯೋಗಿಸುವ ತೀರ್ಮಾನವನ್ನು ಅನುಷ್ಠಾನ ಮಾಡುವುದು ಸರಕಾರದ ಹೊಣೆಗಾರಿಕೆ. ಆದರೆ ಈ ನಡುವೆ ರಾಜಕೀಯ ಉದ್ದೇಶದಿಂದ ಕ್ರಿಶ್ಚಿಯನ್ ನಿಗಮವನ್ನು ಬಿಟ್ಟು ಕೆಲವು ನಿಗಮ ಮಾಡಲು ಹೊರಡಿದ್ದಾರೆ. ಮರಾಠ ಸಮುದಾಯ, ವೀರಶೈವ ಲಿಂಗಾಯತ ಸಮುದಾಯ ಕ್ಕೆ ನಿಗಮ ಮಾಡಲು ಹೊರಟಿದ್ದಾರೆ. ಕ್ರೈಸ್ತ ಸಮುದಾಯಕ್ಕೆ ಸರಕಾರದಿಂದ ಆಗಿರುವ ಅನ್ಯಾಯದ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಹೋರಾಟ ನಡೆಸಲಾಗುವುದು ಐವನ್ ಡಿ ಸೋಜ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಎ.ಸಿ. ಜಯರಾಜ್, ಲ್ಯಾನ್ಸಿ ಎಲ್ ಪಿಂಟೋ, ನವೀನ್ ಡಿ ಸೋಜ, ಸ್ಟೀಪನ್ ಮರೋಳಿ, ಕ್ರೈಸ್ತ ಮುಖಂಡರಾದ ಸ್ಟಾನ್ಲಿ ಅಲ್ವಾರೀಸ್, ಲಾರೆನ್ಸ್ ಡಿ ಸೋಜ, ಅಲಿಸ್ಟ್ ರ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!