Friday, July 10, 2026
Homeಕರಾವಳಿಮೀನುಗಾರಿಕೆಗೆ ತೆರಳಿದ್ದ ಬೋಟ್ ರತ್ನಗಿರಿಯಲ್ಲಿ ಮುಳುಗಡೆ; ಏಳು ಮಂದಿ ಮೀನುಗಾರರ ರಕ್ಷಣೆ

ಮೀನುಗಾರಿಕೆಗೆ ತೆರಳಿದ್ದ ಬೋಟ್ ರತ್ನಗಿರಿಯಲ್ಲಿ ಮುಳುಗಡೆ; ಏಳು ಮಂದಿ ಮೀನುಗಾರರ ರಕ್ಷಣೆ

- Advertisement -
- Advertisement -

ಉಡುಪಿ: 7 ಮಂದಿ ಮೀನುಗಾರರನ್ನು ಹೊತ್ತ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಆಳಸಮುದ್ರ ದೋಣಿ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಮುಳುಗಡೆಗೊಂಡಿದ್ದು ಅದರಲ್ಲಿದ್ದ ರಕ್ಷಿಸಲಾಗಿದೆ.

ಮೀನುಗಾರಿಕೆಗೆಂದು ಮಲ್ಪೆ ಬಂದರಿನಿಂದ ತೆರಳಿದ್ದ ಪ್ರಕಾಶ್‌ ದೇವಾಡಿಗ ಅವರಿಗೆ ಸೇರಿದ ಆನಂತಕೃಷ್ಣ ಬೋಟು ರತ್ನಗಿರಿ ಸಮೀಪ ಮೀನುಗಾರಿಕೆ ನಡೆಸುತ್ತಿರುವಾಗ ಬೋಟಿನ ಒಳಗೆ ನೀರು ಬರಲಾರಂಭಿಸಿತು.

ತತ್‌ಕ್ಷಣ ಸಮೀಪದಲ್ಲಿದ್ದ ಮೀನಾಕ್ಷಿ ಮತ್ತು ಗಾಯತ್ರಿ ರಕ್ಷಾ ಬೋಟಿನವರು ಈ ಬೋಟಿನಲ್ಲಿದ್ದ 7 ಮಂದಿಯನ್ನು ರಕ್ಷಿಸಿದರು. ಬೋಟನ್ನು ಮಾತ್ರ ರಕ್ಷಣೆ ಮಾಡಲು ಸಾಧ್ಯವಾಗದೆ ಮುಳುಗಡೆಗೊಂಡಿತು. 6 ಲಕ್ಷ ರೂ. ಮೌಲ್ಯದ ಮೀನು, ಬಲೆ, ಡೀಸೆಲ್‌ ಸೇರಿದಂತೆ ಸುಮಾರು 60 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

- Advertisement -

Latest News

error: Content is protected !!