Friday, June 5, 2026
Homeಕರಾವಳಿಮಂಗಳೂರು; ಬಜ್ಪೆಯಲ್ಲಿ ಫ್ಲ್ಯಾಟ್ ವೊಂದರಲ್ಲಿ ಅಗ್ನಿ ಅನಾಹುತ

ಮಂಗಳೂರು; ಬಜ್ಪೆಯಲ್ಲಿ ಫ್ಲ್ಯಾಟ್ ವೊಂದರಲ್ಲಿ ಅಗ್ನಿ ಅನಾಹುತ

- Advertisement -
- Advertisement -

ಮಂಗಳೂರು; ಕಂದಾವರ ಗ್ರಾಮ ಪಂಚಾಯತ್‌ ಬಳಿ ಇರುವ ಫ್ಲ್ಯಾಟ್‌ವೊದಂರಲ್ಲಿ ಬುಧವಾರ ರಾತ್ರಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.ರಾತ್ರಿ ಸುಮಾರು 9.45ರ ವೇಳೆ ನೆಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟವಾಗಿ ಹೊಗೆ ಮೇಲಿನ ಮಹಡಿಗೆ ಆವರಿಸಿದೆ.ಕೂಡಲೇ ಫ್ಲ್ಯಾಟ್ ನಲ್ಲಿದ್ದ 30 ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಫ್ಲ್ಯಾಟ್‌ ಪೂರ್ತಿ ಹೊಗೆ ಆವರಿಸಿದ್ದರಿಂದ ಅಲ್ಲಿದ್ದವರನ್ನು ರಕ್ಷಿಸುವುದು ಸವಾಲಿನ ಕೆಲಸವಾಗಿತ್ತು.ಕೂಡಲೇ ಗುರುಪುರದ ರಫೀಕ್‌ ಅವರನ್ನು ಕರೆಸಿ ಸ್ಥಳೀಯರೂ ಜೊತೆ ಸೇರಿ ಅಪಾಯಕ್ಕೆ ಸಿಲುಕಿದ್ದ ಎಲ್ಲ 30 ಮಂದಿಯನ್ನು ರಕ್ಷಿಸಿದ್ದಾರೆ.

ರಾತ್ರಿಯಾಗಿದ್ದರಿಂದ ಇಡೀ ಕಾರ್ಯಾಚರಣೆಯನ್ನು ಮೊಬೈಲ್‌ ಬೆಳಕಿನಲ್ಲಿ ಮಾಡಲಾಗಿದ್ದು. ರೂಮ್‌ಗಳಲ್ಲಿ ಸಿಲುಕಿದ್ದವರನ್ನು ರಕ್ಷಿಸಲಾಗಿದೆ. ಇನ್ನು ಶಾರ್ಟ್ ಸರ್ಕ್ಯೂಟ್ ನಿಂದ ಅನಾಹುತ ಸಂಭವಿಸಿದೆ ಎನ್ನಲಾಗಿದೆ.

- Advertisement -

Latest News

error: Content is protected !!