Friday, June 5, 2026
Homeಕರಾವಳಿಸುಬ್ರಮಣ್ಯದಲ್ಲಿ ಆಕಸ್ಮಿಕ ಅಗ್ನಿ ಅವಘಡ

ಸುಬ್ರಮಣ್ಯದಲ್ಲಿ ಆಕಸ್ಮಿಕ ಅಗ್ನಿ ಅವಘಡ

- Advertisement -
- Advertisement -

ಸುಬ್ರಹ್ಮಣ್ಯ: ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿರುವ ಘಟನೆ  ಬಿಳಿನೆಲೆ ಗ್ರಾಮದ ಪಾಲ್ತಾಜೆ ರಸ್ತೆಯ ನವಜೀವನ ಕಾಲನಿ ಸಮೀಪ ನಡೆದಿದೆ.  ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ನಿಂದ ಕಾಳಿಚ್ಚು ಹಬ್ಬಿ ಘಟನೆ ನಡೆದಿದೆ.

ಮಾಹಿತಿ ತಿಳಿದ ಶೌರ್ಯ ವಿಪತ್ತು ನಿರ್ವಹಣ ಮರ್ದಾಳ ಘಟಕ ಬಿಳಿನೆಲೆ ವಲಯದ ಸದಸ್ಯರು ಸ್ಥಳೀಯರ ಸಹಕಾರದಲ್ಲಿ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ದಳದವರೂ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

ಈ ಸಂದರ್ಭ ಶೌರ್ಯ ಘಟಕದ ಸದಸ್ಯರಾದ ಭವಾನಿ ಶಂಕರ, ವಿನೋದ್‌ ಕೆ.ಸಿ., ರಾಜೇಶ್‌, ಭರತ ಎಸ್‌., ಬಿಳಿನೆಲೆ ಪಂಚಾಯತ್‌ ಅಧ್ಯಕ್ಷ ಶಿವಶಂಕರ್‌, ಮೆಸ್ಕಾಂ ಲೈನ್‌ಮನ್‌ ರಮೇಶ್‌, ಅಗ್ನಿಶಾಮಕ ದಳದ ಸಿಬಂದಿ, ಅರಣ್ಯ ಅಧಿಕಾರಿಗಳು, ಸಿಬಂದಿ, ಸಾರ್ವಜನಿಕರು ಸಹಕರಿಸಿದರು.

- Advertisement -

Latest News

error: Content is protected !!