Thursday, June 4, 2026
Homeಕರಾವಳಿಬಂಟ್ವಾಳ: ವಾಣಿಜ್ಯ ಮಳಿಗೆಯಲ್ಲಿ ಬೆಂಕಿ ಅನಾಹುತ

ಬಂಟ್ವಾಳ: ವಾಣಿಜ್ಯ ಮಳಿಗೆಯಲ್ಲಿ ಬೆಂಕಿ ಅನಾಹುತ

- Advertisement -
- Advertisement -

ಬಂಟ್ವಾಳ:ವಾಣಿಜ್ಯ ಮಳಿಗೆಯೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ಬಂಟ್ವಾಳದ ಬಡ್ಡಕಟ್ಟೆ ಎಂಬಲ್ಲಿ ನಡೆದಿದೆ.
ಬಂಟ್ವಾಳ ಪೇಟೆಯ ಬಡ್ಡಕಟ್ಟೆಯಲ್ಲಿರುವ ಪುರಸಭಾ ವಾಣಿಜ್ಯ ಮಳಿಗೆಯೊಂದರಲ್ಲಿ ಅಗ್ನಿ ಆಕಸ್ಮಿಕ ಮಂಗಳವಾರ ಮಧ್ಯಾಹ್ನ ಬೆಂಕಿ ಅನಾಹುತ ಸಂಭವಿಸಿದೆ. ಪರಿಣಾಮ ಹಲವು ಸೊತ್ತುಗಳು ಸುಟ್ಟುಹೋಗಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬಂದಿ ಸ್ಥಳೀಯ ಸಹಕಾರದೊಂದಿಗೆ ಬೆಂಕಿ ನಂದಿಸಿದ್ದಾರೆ.
ಅಂಗಡಿಯಲ್ಲಿದ್ದ ಸುಮಾರು ‌ಲಕ್ಷಾಂತರ ರೂ.ಬೆಲೆಬಾಳುವ ಟಿ.ವಿ.ಸಹಿತ ಅನೇಕ ಗೃಹೋಪಯೋಗಿ ಉಪಕರಣಗಳು ಸುಟ್ಟು ಹೋಗಿದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!