Sunday, October 18, 2026
Homeಕರಾವಳಿಗೋವಾ ಸಮೀಪ ಮಂಗಳೂರು ಮೂಲದ ಬೋಟ್ ನಲ್ಲಿ ಬೆಂಕಿ ಅನಾಹುತ

ಗೋವಾ ಸಮೀಪ ಮಂಗಳೂರು ಮೂಲದ ಬೋಟ್ ನಲ್ಲಿ ಬೆಂಕಿ ಅನಾಹುತ

- Advertisement -
- Advertisement -

ಕಾರವಾರ: ಗೋವಾದ ಕಾಣಕೋಣ ಸಮೀಪ ಮಂಗಳೂರು ಮೂಲದ ಮೀನುಗಾರಿಕಾ ಬೋಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಮುಳಗುವ ಹಂತದಲ್ಲಿದ್ದ ಯಾಂತ್ರಿಕ ದೋಣಿಯನ್ನು ರಕ್ಷಣೆ ಮಾಡಲಾಗಿದ್ದು ಕಾಣಕೋಣದಿಂದ 25 ನಾಟಿಕಲ್ ಮೈಲು ದೂರದ ಅರಬ್ಬಿ ಸಮುದ್ರದಲ್ಲಿ ಅನಾಹುತ ಸಂಭವಿಸಿದೆ.

ರಾಯಲ್ ಬ್ಲೂ ಹೆಸರಿನ ಬೋಟ್‌ ನಲ್ಲಿ ಇದ್ದ ಏಳು ಮೀನುಗಾರರು ಸುರಕ್ಷಿತವಾಗಿದ್ದಾರೆ.ಉಳಿದ ಆರು ಬೋಟ್ ಗಳ ಸಹಾಯದಿಂದ ಕಾರವಾರ ಬಂದರಿಗೆ ರಾಯಲ್ ಬ್ಲೂ‌ ಬೋಟ್ ಅನ್ನು ತರಲಾಗಿದೆ

ಕೋಸ್ಟ್ ಗಾರ್ಡ್ ಮತ್ತು ಕರಾವಳಿ ಕಾವಲು ಪಡೆ ಸಹಾಯ ಪಡೆದು ಮೀನುಗಾರರು ಬೆಂಕಿ ಅನಾಹುತ ಸಂಭವಿಸಿದ್ದ ಬೋಟ್ ಅನ್ನು ರಕ್ಷಣೆ ಮಾಡಿದ್ದಾರೆ.

- Advertisement -

Latest News

error: Content is protected !!