Saturday, October 17, 2026
Homeಕರಾವಳಿಚಾರ್ಮಾಡಿಯಲ್ಲಿ ಮಧ್ಯರಾತ್ರಿ ತಪ್ಪಿದ ಭಾರೀ ಅನಾಹುತ: ನಿಲ್ಲಿಸಿದ್ದ ಕಲ್ಲಿದ್ದಲು ಲಾರಿಯಲ್ಲಿ...

ಚಾರ್ಮಾಡಿಯಲ್ಲಿ ಮಧ್ಯರಾತ್ರಿ ತಪ್ಪಿದ ಭಾರೀ ಅನಾಹುತ: ನಿಲ್ಲಿಸಿದ್ದ ಕಲ್ಲಿದ್ದಲು ಲಾರಿಯಲ್ಲಿ ಬೆಂಕಿ

- Advertisement -
- Advertisement -

ಬೆಳ್ತಂಗಡಿ : ಮಂಗಳೂರಿನಿಂದ ಹಾಸನ‌ ಕಡೆಗೆ ಕಲಿದ್ದಲು ತುಂಬಿದ KA-44-192 ನಂಬರಿನ ಮಹಾಲಕ್ಷ್ಮಿ ಎಂಬ ಹೆಸರಿನ ಲಾರಿ ರಾತ್ರಿ ಚಾರ್ಮಾಡಿ ಘಾಟ್ ಪಾಸಾಗಲು ತಡವಾಗಿದ್ದರಿಂದ ಚಾರ್ಮಾಡಿ ಚೆಕ್ ಪೊಸ್ಟ್‌ನಲ್ಲಿ ನಿಲ್ಲಿಸಿ ಅದರೊಳಗೆ ನಾಲ್ಕು ಜನ ನಿದ್ರಿಸುತ್ತಿದ್ದರು ಮಧ್ಯ ರಾತ್ರಿ 2:30 ರ ಸುಮಾರಿಗೆ ಕಲ್ಲಿದ್ದಲಿನ ಅಡಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ತಕ್ಷಣ ಚೆಕ್‌ಪೊಸ್ಟ್ ನಲ್ಲಿದ್ದ ಧರ್ಮಸ್ಥಳ ಪೊಲೀಸರು ಲಾರಿಯಲ್ಲಿದ್ದ ನಾಲ್ಕು ಮಂದಿಯನ್ನು ಎಬ್ಬಿಸಿ ರಕ್ಷಣೆ ಮಾಡಿ ನಂತರ ಬೆಳ್ತಂಗಡಿ ಅಗ್ನಿಶಾಮಕದಳ ಸ್ಥಳಕ್ಕೆ ಮಾಹಿತಿ ನೀಡಿದ್ದು ತಕ್ಷಣ ಸ್ಥಳಕ್ಕೆ ಬಂದು ಬೆಂಕಿ ನಂದಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಠಾಣಾಧಿಕಾರಿ ಎಂ.ಗೋಪಾಲ್,ಪ್ರಮುಖ ಅಗ್ನಿಶಾಮಕ ಕೃಷ್ಣ ನಾಯ್ಕ,ಚಾಲಕ ರತನ್, ಮಾರುತಿ ಟಿ.ಅರ್,ಚಾಕೋ.ಕೆ.ಜೆ ,ವಿನೋದ್ ಪ್ರಮುಖ ಪಾತ್ರ ವಹಿಸಿದ್ದರು.

- Advertisement -

Latest News

error: Content is protected !!