Saturday, June 28, 2025
Homeಕರಾವಳಿಮಂಗಳೂರು:ಕ್ಯಾಟಸಿಂತ್ ಕೆಮಿಕಲ್ಸ್ ಪ್ರೈವೇಟ್ ಲಿ. ಕಂಪೆನಿಯಲ್ಲಿ ಬೆಂಕಿ ಅನಾಹುತ!

ಮಂಗಳೂರು:ಕ್ಯಾಟಸಿಂತ್ ಕೆಮಿಕಲ್ಸ್ ಪ್ರೈವೇಟ್ ಲಿ. ಕಂಪೆನಿಯಲ್ಲಿ ಬೆಂಕಿ ಅನಾಹುತ!

spot_img
- Advertisement -
- Advertisement -

ಮಂಗಳೂರು: ಕ್ಯಾಟಸಿಂತ್ ಕೆಮಿಕಲ್ಸ್ ಪ್ರೈವೇಟ್ ಲಿ. ಕಂಪೆನಿಯಲ್ಲಿ ಗುರುವಾರ ಬೆಂಕಿ ಅನಾಹುತ ಸಂಭವಿಸಿದ್ದು, ಭಾರೀ ಪ್ರಮಾಣದ ಹೊಗೆ ಪರಿಸರದಲ್ಲಿ ಹರಡಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸುವಂತೆ ಮಾಡಿದೆ.

ಸುರತ್ಕಲ್ ಸಮೀಪದ ಎಸ್‌ಇಝಡ್‌ನಲ್ಲಿರುವ ಈ ಕಂಪನಿ ಕಳೆದ ಎಪ್ರಿಲ್‌ ತಿಂಗಳಿನಲ್ಲಿ ಕೂಡ ಬೆಂಕಿ ಅವಘಡಕ್ಕೀಡಾಗಿತ್ತು. ಅದರ ದುರಸ್ತಿ ಕಾರ್ಯವು ಈಗಲೂ ಮುಂದುವರಿದಿದ್ದು, ವೆಲ್ಡಿಂಗ್ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ದಟ್ಟ ಹೊಗೆ ಕಾಣಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆದರೆ ಕಂಪೆನಿಯ ಮೂಲಗಳು ಇನ್ನೂ ಈ ಬಗ್ಗೆ ಖಚಿತ ಮಾಹಿತಿಯನ್ನು ನೀಡಿಲ್ಲ.ಗುರುವಾರ ಈ ಕಂಪೆನಿಯಲ್ಲಿ ಸಿಬ್ಬಂದಿಗಳ ಸಂಖ್ಯೆ ಕಡಿಮೆ ಇದ್ದುದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

ಮಂಗಳೂರು ಕದ್ರಿ ಅಗ್ನಿಶಾಮಕ ದಳ, ಎಚ್‌ಪಿಸಿಎಲ್, ಎನ್‌ಎಂಪಿಟಿ ಸಿಬ್ಬಂದಿ ವರ್ಗ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು,ಘಟನಾ ಸ್ಥಳಕ್ಕೆ ಬಜ್ಪೆ ಪೊಲೀಸರು ಭೇಟಿ ನೀಡಿದ್ದಾರೆ.

- Advertisement -
spot_img

Latest News

error: Content is protected !!