Thursday, June 4, 2026
Homeತಾಜಾ ಸುದ್ದಿನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ವಿರುದ್ಧ ಮತ್ತೊಂದು ಎಫ್ ಐಆರ್ ದಾಖಲು

ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ವಿರುದ್ಧ ಮತ್ತೊಂದು ಎಫ್ ಐಆರ್ ದಾಖಲು

- Advertisement -
- Advertisement -

ಬೆಂಗಳೂರು : ನಟಿ  ಶ್ರೀಲೀಲಾ ತಾಯಿ ಸ್ವರ್ಣಲತಾ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ . ʻನನ್ನ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆಂದುʼ ಪತ್ನಿಯ ವಿರುದ್ಧವೇ ಪತಿ ದೂರು ನೀಡಿದ್ದಾರೆ.

ಸ್ವರ್ಣಲತಾ ಹಾಗೂ ಸುಧಾಕರ್‌ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿದೆ. ಇಪ್ಪತ್ತು ವರ್ಷಗಳಿಂದ ಬೇರೆ ಬೇರೆ ವಾಸವಾಗಿದ್ದರು. ಈ ಜೋಡಿ ಡಿವೋರ್ಸ್ ಪಡೆಯಲು ಕೋರ್ಟ್‌ ಮೆಟ್ಟಿಲೇರಿದ್ದಾರೆ ಎನ್ನಲಾಗಿದೆ

ಸುಧಾಕರ್‌ ಅವರ ಮನೆ ಕೋರಮಂಗಲದಲ್ಲಿದೆ. ಅದು ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ನಲ್ಲಿರುವ ಪ್ಲ್ಯಾಟ್ ಆಗಿದೆ. ಪತ್ನಿ ಬೀಗ ಮುರಿದು ನನ್ನ ಮನೆಗೆ ಪ್ರವೇಶ ಮಾಡಿದ್ದಾರೆಂದು ಎಫ್‌ಐಆರ್‌ನಲ್ಲಿ ದೂರು ನೀಡಲಾಗಿದೆ. ಆಡುಗೋಡಿ ಠಾಣೆಗೆ ಸ್ವರ್ಣಲತಾ ಪತಿ ಸುಧಾಕರ್‌ ಸೂಪರ್ನೇನಿ ಪತ್ನಿ ವಿರುದ್ಧವೇ ದೂರು ನೀಡಿದ್ದಾರೆ. ಈ ಬಗ್ಗೆ ಆಡುಗೋಡಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!