- Advertisement -
- Advertisement -
ಪುತ್ತೂರು; ಅತ್ತ ಒಳಗೆ ಎಸ್ಸೆಸೆಲ್ಸಿ ಎಕ್ಸಾಂ ಬರೆಯುತ್ತಿದ್ದರೆ ಇತ್ತ ಹೊರಗೆ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಕೊನೆಗೆ ಚಿತ್ರೀಕರಣ ನಡೆಸದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ತಡೆ ಒಡ್ಡಿದ ಘಟನೆ ಪುತ್ತೂರಿನ ವಿಕ್ಟರ್ಸ್ ಶಾಲೆಯ ಆವರಣದಲ್ಲಿ ನಡೆದಿದೆ.
ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯುತ್ತಿದ್ದ ಪುತ್ತೂರು ಸಂತ ವಿಕ್ಟರ್ಸ್ ಶಾಲೆಯ ಪಕ್ಕದ ಚರ್ಚ್ ಬಳಿ ಸಿನೆಮಾ ಶೂಟಿಂಗ್ ನಡೆಸಲಾಗುತ್ತಿತ್ತು, ಆದರೆ ಎಸ್ಎಸ್ಎಲ್ ಸಿ ಪರೀಕ್ಷೆ ಹಿನ್ನಲೆ ಪರೀಕ್ಷಾ ಕೇಂದ್ರದ ನಿಷೇಧಾಜ್ಞೆ ಜಾರಿಯಲ್ಲಿದೆ. ಆದರೂ ಸಿನೆಮಾ ಶೂಟಿಂಗ್ ಗೆ ಅವಕಾಶ ನೀಡಲಾಗಿದೆ ಎಂದು ಹೇಳಲಾಗಿದೆ.
ಸಿನೆಮಾ ಶೂಟಿಂಗ್ ನಡೆಯುತ್ತಿರುವ ಬಗ್ಗೆ ದೂರು ಬಂದ ಹಿನ್ನಲೆ ಸ್ಥಳಕ್ಕೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಆಗಮಿಸಿ ಶೂಟಿಂಗ್ ನಡೆಸದಂತೆ ತಿಳಿಸಿದ್ದಾರೆ.
- Advertisement -