Friday, June 5, 2026
Homeಕರಾವಳಿಮಂಗಳೂರು: ಟೈಮಿಂಗ್ ವಿಚಾರದಲ್ಲಿ ಖಾಸಗಿ ಬಸ್ ಚಾಲಕರು ನಿರ್ವಾಹಕರ ಮಧ್ಯೆ ಫೈಟಿಂಗ್; ಕಂಡೆಕ್ಟರ್ ಹಾಗೂ ಡ್ರೈವರ್...

ಮಂಗಳೂರು: ಟೈಮಿಂಗ್ ವಿಚಾರದಲ್ಲಿ ಖಾಸಗಿ ಬಸ್ ಚಾಲಕರು ನಿರ್ವಾಹಕರ ಮಧ್ಯೆ ಫೈಟಿಂಗ್; ಕಂಡೆಕ್ಟರ್ ಹಾಗೂ ಡ್ರೈವರ್ ನ್ನು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ಮಂಗಳೂರು: :  ಟೈಮಿಂಗ್ ವಿಚಾರದಲ್ಲಿ ನೂಕಾಟ ತಳ್ಳಾಟ ನಡೆಸುತ್ತಿದ್ದ ಎರಡು ಸಿಟಿ ಬಸ್‌ಗಳ ಚಾಲಕರು ಮತ್ತು ನಿರ್ವಾ ಹಕರನ್ನು ಉರ್ವ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶನಿವಾರ ಬೆಳಗ್ಗೆ 6.50ಕ್ಕೆ ಅಶೋಕನಗರ ಶೇಡಿಗುರಿ ಬಸ್‌ ನಿಲ್ದಾಣ ಎದುರು ಎರಡು ಬಸ್‌ಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಚಾಲಕರಾದ ಸಾಗರ್‌, ವಿಘ್ನೇಶ್‌, ನಿರ್ವಾಹಕರಾದ ಸುಧೀರ್‌, ಶ್ರೀಧರ್‌ ಪರಸ್ಪರ ಬೈದಾಡಿ ತಳ್ಳಾಟ ನಡೆಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ್ದರು. ಈ ಹಿನ್ನೆಲೆ ಬಸ್‌ ಮತ್ತು ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!