ಪುತ್ತೂರು; ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದು ಇಬ್ಬರಿಗೆ ಗಾಯಗಳಾಗಿರುವ ಘಟನೆ ಠಾಣಾ ವ್ಯಾಪ್ತಿಯ ನೆಕ್ಕಿಲಾಡಿ ಎಂಬಲ್ಲಿ ಮಾ.27 ರ ಸಂಜೆ ನಡೆದಿದೆ. ಈಶ್ವರಮಂಗಲ ಮೂಲದ ದೀಕ್ಷಿತ್ ರೈ ಕುತ್ಯಾಳ, ಸ್ವಸ್ತಿಕ್ ಗಾಯಗೊಂಡವರು.
ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ, ಸಾಮಾಜಿಕ ಜಾಲತಾಣದಲ್ಲಿ ಫೊಟೋ ವೈರಲ್ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ಎರಡೂ ಗುಂಪಿನವರು ಮೊದಲಿಗೆ ಸ್ನೇಹಿತರಾಗಿದ್ದವರು ಎನ್ನಲಾಗಿದ್ದು, ನಂತರ ವ್ಯವಹಾರದಲ್ಲಿ ಮನಸ್ತಾಪ ಉಂಟಾಗಿ ಬೇರೆಯಾಗಿದ್ದರು ಎನ್ನಲಾಗಿದೆ.
ಆರಂಭದಲ್ಲಿ ಪುತ್ತೂರಿನ ದರ್ಬೆ ಸಮೀಪದ ಹೋಟೆಲ್‌ನಲ್ಲಿ ಜಗಳ ಪ್ರಾರಂಭವಾಗಿದೆ ಎನ್ನಲಾಗಿದೆ. ಇನ್ನು ಘಟನೆಯ ಮಾಹಿತಿ ಆಧರಿಸಿ ನಗರ ಠಾಣೆಯ ಪೊಲೀಸರು ಇತ್ತಂಡವನ್ನು ಸಮಾಧಾನಪಡಿಸಿ ಕಳುಹಿಸಿರುವ ಕುರಿತು ವರದಿಯಾಗಿದೆ. ಇದಾದ ನಂತರ ಕೆಲ ಹೊತ್ತಲ್ಲಿ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ನೆಕ್ಕಿಲಾಡಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದು ಮತ್ತೆ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.