Saturday, May 18, 2024
Homeಕರಾವಳಿಉಡುಪಿಕಾರ್ಕಳ; ಪತಿ ಹಾಗೂ ಪತ್ನಿ ನಡುವೆ ಗಲಾಟೆ; ಹೆಂಡತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕಾರ್ಕಳ; ಪತಿ ಹಾಗೂ ಪತ್ನಿ ನಡುವೆ ಗಲಾಟೆ; ಹೆಂಡತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

spot_img
- Advertisement -
- Advertisement -

ಕಾರ್ಕಳ: ಸಾಲ ಕಟ್ಟುವ ವಿಚಾರಕ್ಕೆ ಪತಿ ಹಾಗೂ ಪತ್ನಿ ನಡುವೆ ಗಲಾಟೆ ನಡೆದು ಹೆಂಡತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳ ಪತ್ತೊಂಜಿಕಟ್ಟೆ ಎಂಬಲ್ಲಿ ನಡೆದಿದೆ.ಪತ್ತೊಂಜಿಕಟ್ಟೆ ನಿವಾಸಿ ಅಣ್ಣಪ್ಪ ಎಂಬವರ ಪತ್ನಿ ಪುಷ್ಪ (23)ಮೃತ ದುರ್ದೈವಿ.

ಗೇರುಬೀಜ ಸಿಪ್ಪೆ ತೆಗೆಯುವ ಕೆಲಸ ಮಾಡಿಕೊಂಡಿದ್ದ ಪುಷ್ಪಾ ಮೇ 6ರಂದು ಸ್ವಸಹಾಯ ಸಂಘದ ಸಾಲ ಕಟ್ಟುವ ಬಗ್ಗೆ ಪತಿಯೊಂದಿಗೆ ಚರ್ಚೆ ಮಾಡಿದ್ದು, ನಾಳೆ ಬೆಳಗ್ಗೆ ಹಣದ ವ್ಯವಸ್ಥೆ ಮಾಡುವುದಾಗಿ ಪತಿ ಹೇಳಿದ್ದರು. ಆದರೆ ಪುಷ್ಪಾ ಈಗಲೇ ಹಣ ಬೇಕೆಂದು ಹೇಳಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಇದರಿಂದ ಮನನೊಂದ ಪುಷ್ಪಾ, ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರು ಪತಿ, ನಾಲ್ಕೂವರೆ ವರ್ಷದ ಗಂಡು ಮಗುವನ್ನು ಅಗಲಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ

- Advertisement -
spot_img

Latest News

error: Content is protected !!