Tuesday, July 2, 2024
Homeಕರಾವಳಿಉಡುಪಿಉಡುಪಿ: ಸಮುದ್ರ ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆ: ಮಲ್ಪೆ ಬೀಚ್ ನಲ್ಲಿ ತಡೆ ಬೇಲಿ ಅಳವಡಿಕೆ

ಉಡುಪಿ: ಸಮುದ್ರ ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆ: ಮಲ್ಪೆ ಬೀಚ್ ನಲ್ಲಿ ತಡೆ ಬೇಲಿ ಅಳವಡಿಕೆ

spot_img
- Advertisement -
- Advertisement -

ಉಡುಪಿ: ಕಳೆದ ಕೆಲವು ದಿನಗಳಿಂದ ಕರಾವಳಿಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಹಿನ್ನೆಲೆಯಲ್ಲಿ ಮಲ್ಪೆ ಬೀಚ್‌ನಲ್ಲಿ ಕಡಲು ಪ್ರಕ್ಷುಬ್ಧಗೊಂಡಿದೆ.

ಈ ಕಾರಣಕ್ಕಾಗಿ ಬೀಚ್ ಗೆ ಆಗಮಿಸುವ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ತಡೆ ಬೇಲಿಯನ್ನು ಅಳವಡಿಸಲಾಗಿದೆ. ಸುಮಾರು ಒಂದು ಕಿಲೋ ಮೀಟರ್ ಉದ್ದಕ್ಕೆ ಏಳು ಅಡಿ ಎತ್ತರಕ್ಕೆ ಬಲೆ ಅಳವಡಿಸಲಾಗಿದ್ದು, ಅಲ್ಲಲ್ಲಿ ಎಚ್ಚರಿಕೆಯ ಫಲಕಗಳನ್ನು ಕೂಡಾ ಹಾಕಲಾಗಿದೆ.

ಮಲ್ಪೆ ಬೀಚ್ ನಲ್ಲಿ ಸಮುದ್ರದ ಅಲೆಗಳ ಏರಿಳಿತ ಜೋರಾಗಿದ್ದು, ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.

ಇದೀಗ ಮುನ್ನೆಚ್ಚರಿಕೆಯ ಕ್ರಮವಾಗಿ ಬೀಚ್ ನಲ್ಲಿ ಬಲೆಯಿಂದ ತಡೆ ಬೇಲಿ ನಿರ್ಮಿಸಲಾಗಿದ್ದು, ಸಮುದ್ರಕ್ಕೆ ಇಳಿಯಲು ಅವಕಾಶವಾಗದ ಕಾರಣ ಪ್ರವಾಸಿಗರು ನಿರಾಸೆಗೊಳಗಾಗುವಂತಾಗಿದೆ

- Advertisement -
spot_img

Latest News

error: Content is protected !!