Friday, May 17, 2024
Homeಇತರತಂದೆಯ ಲ್ಯಾಪ್ ಟಾಪ್ ನೋಡಿದ ಮಗಳಿಗೆ ಕಾದಿತ್ತು ಶಾಕ್ ! ಲ್ಯಾಪ್ ಟಾಪ್ ನಲ್ಲಿತ್ತು ತನ್ನ...

ತಂದೆಯ ಲ್ಯಾಪ್ ಟಾಪ್ ನೋಡಿದ ಮಗಳಿಗೆ ಕಾದಿತ್ತು ಶಾಕ್ ! ಲ್ಯಾಪ್ ಟಾಪ್ ನಲ್ಲಿತ್ತು ತನ್ನ ನಗ್ನ ಫೋಟೋಗಳು

spot_img
- Advertisement -
- Advertisement -

ಹೈದರಾಬಾದ್​: ಮಲ ತಂದೆಯ ಲ್ಯಾಪ್​ಟಾಪ್​​ನಲ್ಲಿ ತನ್ನ ನಗ್ನ ಚಿತ್ರಗಳನ್ನು ನೋಡಿದ ಯುವತಿಯೊಬ್ಬಳು ಅಘಾತಕ್ಕೊಳಗಾದ ಘಟನೆ ತೆಲಂಗಾಣದ ಮುನ್ಸಿಪಾಲಿಟಿ ನಾಚಾರಾಮ್​ನಿಂದ ವರದಿಯಾಗಿದೆ.

ಆರೋಪಿಯನ್ನು 40 ವರ್ಷದ ರೆಸ್ಟೋರೆಂಟ್​ ಮಾಲೀಕ ರಾಜೇಶ್​ ಎಂದು ಗುರುತಿಸಲಾಗಿದೆ. ತನ್ನ ಮಗಳು ಅಪ್ರಾಪ್ತೆಯಾಗಿದ್ದ ಸಮಯದಲ್ಲಿ ಆರೋಪಿ ನಗ್ನ ಚಿತ್ರಗಳನ್ನು ತೆಗೆದು ಲ್ಯಾಪ್​ಟಾಪ್​ನಲ್ಲಿ ಸೇವ್​ ಮಾಡಿಟ್ಟುಕೊಂಡಿದ್ದ.

ಇದೀಗ ಸಂತ್ರಸ್ತೆಗೆ 20 ವರ್ಷ ವಯಸ್ಸಾಗಿದ್ದು, ಕಾನೂನು ವಿದ್ಯಾರ್ಥಿನಿಯಾಗಿರುವ ಆಕೆ ಜುಲೈನಲ್ಲಿ ಮಲ ತಂದೆಯ ಲ್ಯಾಪ್​ಟಾಪ್​ ಬಳಸುವಾಗ ತನ್ನದೇ ನಗ್ನ ಚಿತ್ರಗಳನ್ನು ನೋಡಿ ಬೆಚ್ಚಿಬಿದ್ದಿದ್ದಾಳೆ. ಫೋಟೋಗಳನ್ನು ತೆಗೆದಾಗ ಸಂತ್ರಸ್ತೆಗೆ 14 ಅಥವಾ 15 ವರ್ಷ ವಯಸ್ಸಾಗಿತ್ತು ಎಂದು ನಾಚಾರಾಮ್​ ಠಾಣೆಯ ಪೊಲೀಸ್​ ಇನ್ಸ್​ಪೆಕ್ಟರ್​ ಕಿರಣ್​ ಕುಮಾರ್​ ತಿಳಿಸಿದ್ದಾರೆ.

ಅಂದಹಾಗೆ ಆರೋಪಿ ರಾಜೇಶ್​ಗೆ ಸಂತ್ರಸ್ತೆ ಯುವತಿಯ ತಾಯಿ ಎರಡನೇ ಪತ್ನಿಯಾಗಿದ್ದಾಳೆ. ಲ್ಯಾಪ್​ಟಾಪ್​ ಫೋಟೋಗಳಿರುವ ಬಗ್ಗೆ ಯುವತಿ ತನ್ನ ತಾಯಿಗೆ ತಿಳಿಸಿದ್ದಾಳೆ. ಬಳಿಕ ಇಬ್ಬರು ತೆರಳಿ ಠಾಣೆಗೆ ದೂರು ನೀಡಿದ್ದು, ಜುಲೈ 29ರಂದು ದೂರು ದಾಖಲಾಗಿದೆ.

ಆರೋಪಿಯನ್ನು ಈ ಮೊದಲೇ ಬಂಧಿಸಿದ್ದೆವು. ಆದರೆ, ಆತನಿಗೆ ಕರೊನಾ ವೈರಸ್​ ಪಾಸಿಟಿವ್​ ಇದೆ. ಗುಣಮುಖವಾದ ಬಳಿಕ ಆತನನ್ನು ಸೋಮವಾರ ವಶಕ್ಕೆ ಪಡೆದುಕೊಂಡಿದ್ದೇವೆಂದು ಮಲ್ಕಜ್​ಗಿರಿ ಎಸಿಪಿ ನರಸಿಂಹ ರೆಡ್ಡಿ ತಿಳಿಸಿದ್ದಾರೆ. ಆರೋಪಿ ವಿರುದ್ಧ ಪೊಕ್ಸೊ ಸೇರಿದಂತೆ ಇತರೆ ಐಪಿಸಿ ಸೆಕ್ಸನ್​ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. 

- Advertisement -
spot_img

Latest News

error: Content is protected !!