Friday, April 19, 2024
Homeಕೊಡಗುಮಗಳ ಮದುವೆ ಮಾಡಿಸಿ, ಗಂಡನ ಮನೆಗೆ ಕಳುಹಿಸಿದ ಮರುಕ್ಷಣವೇ ತಂದೆ ಸಾವು

ಮಗಳ ಮದುವೆ ಮಾಡಿಸಿ, ಗಂಡನ ಮನೆಗೆ ಕಳುಹಿಸಿದ ಮರುಕ್ಷಣವೇ ತಂದೆ ಸಾವು

spot_img
- Advertisement -
- Advertisement -

ಕೊಡಗು: ಮಗಳನ್ನು ಮದುವೆ ಮಾಡಿಸಿ ಗಂಡನ ಮನೆಗೆ ಕಾರು ಹತ್ತಿಸಿ ಕಳುಹಿಸಿದ ಕೆಲವೇ ಕ್ಷಣದಲ್ಲಿ ತಂದೆ ನಿಧನವಾದ ಘಟನೆ ಕೊಡಗಿನ ಸೋಮವಾರಪೇಟೆಯಲ್ಲಿ ನಡೆದಿದೆ. ಕಿಬ್ಬೆಟ್ಟ ಗ್ರಾಮದ ಕೃಷಿಕ ಚಿನ್ನಪ್ಪ(60) ಮೃತ ದುರ್ದೈವಿ,

ಸೋಮಪಾರಪೇಟೆಯ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಕಿಬ್ಬೆಟ್ಟ ಗ್ರಾಮದ ಕೃಷಿಕ ಚಿನ್ನಪ್ಪ ಎಂಬವರ ದ್ವಿತೀಯ ಪುತ್ರಿಯ ವಿವಾಹ ನಿನ್ನೆ ನಡೆದಿತ್ತು.  ಕಲ್ಯಾಣ ಮಂಟಪದಲ್ಲಿ ತಮ್ಮ ದ್ವಿತೀಯ ಪುತ್ರಿಯ ವಿವಾಹ ಸಮಾರಂಭವನ್ನು ಮುಗಿಸಿ ವಧು-ವರರನ್ನು ಗೋಕಾಕ್‍ಗೆ ಕಳುಹಿಸಿದ ಕೆಲವೇ ಕ್ಷಣಗಳಲ್ಲಿ ಚಿನ್ನಪ್ಪ ಗೌಡ ಅವರಿಗೆ ಹೃದಯಾಘಾತವಾಗಿದೆ.  ತಕ್ಷಣವೇ ಇಲ್ಲಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.


ಮೃತರು ಪತ್ನಿ ಮತ್ತು ಈರ್ವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಕಿಬ್ಬೆಟ್ಟ ಗ್ರಾಮದಲ್ಲಿ ನಡೆಯಲಿದೆ.

- Advertisement -
spot_img

Latest News

error: Content is protected !!