Saturday, October 17, 2026
Homeಕರಾವಳಿಎಬಿ ಡಿವಿಲಿಯರ್ಸ್‌ ಬಾಯಲ್ಲೂ ಕಾಂತಾರದ್ದೇ ಮಾತು: ಎಬಿಡಿ, ರಿಷಬ್‌ ಶೆಟ್ಟಿಯನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಥ್ರಿಲ್

ಎಬಿ ಡಿವಿಲಿಯರ್ಸ್‌ ಬಾಯಲ್ಲೂ ಕಾಂತಾರದ್ದೇ ಮಾತು: ಎಬಿಡಿ, ರಿಷಬ್‌ ಶೆಟ್ಟಿಯನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಥ್ರಿಲ್

- Advertisement -
- Advertisement -

ಕಾಂತಾರ ಚಿತ್ರ ದೇಶಾದ್ಯಂತ ಧೂಳೆಬ್ಬಿಸಿದೆ. ಬಿಡುಗಡೆಯಾಗಿ ಒಂದು ತಿಂಗಳು ಕಳೆದಿದ್ದರೂ ಅನೇಕ ಕಡೆಗಳಲ್ಲಿ ಈಗಲೂ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಈಗ ಎಬಿ ಡಿವಿಲಿಯರ್ಸ್ ಬಾಯಲ್ಲೂ ಈ ಚಿತ್ರದ ಹೆಸರು ಕೇಳಿ ಅಭಿಮಾನಿಗಳಿಗೆ ಥ್ರಿಲ್​ ಆಗಿದೆ.

ಕಾಂತಾರʼ ಸಿನಿಮಾ ಮೂಲಕ ಯಶಸ್ಸಿನ ಉತ್ತುಂಗದಲ್ಲಿರುವ ನಟ, ನಿರ್ದೇಶಕ ರಿಷಬ್‌ ಶೆಟ್ಟಿ, ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಆಟಗಾರ ಎಬಿ ಡಿವಿಲಿಯರ್ಸ್‌ ಜೊತೆ ಕಾಣಿಸಿಕೊಂಡಿದ್ದಾರೆ.

ಸಿನಿಮಾದ 360 ಡಿಗ್ರಿ ಹಾಗೂ ಕ್ರಿಕೆಟ್‌ನ 360 ಡಿಗ್ರಿ ಮುಖಾಮುಖಿಯಾಗಿದ್ದಾರೆ ಎಂದು ಹೊಂಬಾಳೆ ಫಿಲ್ಸ್ಂ ಟ್ವೀಟ್ ಮಾಡಿದೆ. ಕಂಬಳದಲ್ಲಿ ಕೋಣ ಓಡಿಸುವ ಮುನ್ನ ಹೇಳುವ ʻಬಿಡಿಯಾ…ʼ ಪದವನ್ನು ರಿಷಬ್‌ ಹಾಗೂ ಎಬಿಡಿ ಒಟ್ಟಿಗೆ ಹೇಳಿ, ಒಬ್ಬರು ಕೋಣ ಓಡಿಸಿದ್ರೆ, ಮತ್ತೊಬ್ರು ಕ್ರಿಕೆಟ್ ಬ್ಯಾಟ್ ಬೀಸುವ ಪೋಸ್ಟ್ ವೈರಲ್ ಆಗಿದೆ.

- Advertisement -

Latest News

error: Content is protected !!