- Advertisement -
![]()
- Advertisement -
ರಿಷಭ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಸಿನಿಮಾ ಕಾಂತಾರ ರಿಲೀಸ್‌ಗೆ ರೆಡಿಯಾಗಿದೆ. ಸೆಪ್ಟೆಂಬರ್ 30ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ
ಈ ಚಿತ್ರದಲ್ಲಿ ರಿಷಭ್ ಶೆಟ್ಟಿಯವರು ಕಂಬಳ ಸ್ಪರ್ಧೆಯ ದೃಶ್ಯಗಳಲ್ಲಿ ನಟಿಸಿದ್ದಾರೆ. ಆ ಸನ್ನಿವೇಶಕ್ಕಾಗಿ ಅವರು ನಿಜವಾಗಿಯೂ ಕಂಬಳದ ಕೋಣಗಳನ್ನು ಓಡಿಸುವುದು ಕಲಿತಿದ್ದಾರೆ. ಕರಾವಳಿ ಸೊಗಡಿನ ಕಂಬಳ ಕ್ರೀಡೆ ಜೊತೆಗೆ ಊರು ಮತ್ತು ಅರಣ್ಯ ಇಲಾಖೆಯ ಬಗೆಗಿನ ಕಥೆ ಆಧರಿಸಿರೋ ಕಾಂತಾರ ಚಿತ್ರದ ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ರಿಷಬ್ ಶೆಟ್ಟಿ ಅವರು ಕಂಬಳದ ಕೋಣಗಳನ್ನು ಓಡಿಸುವುದನ್ನು ಕಲಿತಿದ್ದು ಕೆಲವೇ ದಿನಗಳಲ್ಲಿ ಎಂಬುದು ಗಮನಾರ್ಹ ವಿಚಾರ. ಕೆಸರು ಗದ್ದೆಯಲ್ಲಿ ಅವರು ಹಾಕಿದ ಪರಿಶ್ರಮದ ಬಗ್ಗೆ ಇಂಚಿಂಚೂ ವಿವರ ನೀಡುವಂತಹ ವಿಡಿಯೋವನ್ನು ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಬಿಡುಗಡೆ ಮಾಡಿದೆ.
- Advertisement -


