ಮಂಗಳೂರು: ಮಾಧ್ಯಮ ಎಂದು ಸುಳ್ಳು ಗುರುತಿನ ಚೀಟಿ ಅಂಟಿಸಿ ಓಡಾಡುತ್ತಿದ್ದ ಇನ್ನೋವಾ ಕಾರನ್ನು ವಶಪಡಿಸಿಕೊಂಡ ಕಂಕನಾಡಿ ನಗರ ಠಾಣಾ ಪೊಲೀಸರು, ವ್ಯಕ್ತಿ ಹಾಗೂ ಆತನ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ವಿವೇಕ ನಗರದ ಕಾರು ಚಾಲಕ ಹುಸೈನ್ ಅಲಿ ಅಲಿ ಉಸೈನ್ (58) ಬಂಧಿತ ವ್ಯಕ್ತಿ. ನಿನ್ನೆ ಸಂಜೆ 6.45 ಸುಮಾರಿಗೆ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಇನೋವಾ ಕಾರನ್ನು ಸಂಚಾರ ದಕ್ಷಿಣ ಪೊಲೀಸ್ ಇನ್ಸ್ಪೆಕ್ಟರ್ ಪರಿಶೀಲನೆ ಮಾಡಿದಾಗ ಕಾರಿನ ಮುಂದಿನ ಮತ್ತು ಹಿಂದಿನ ಗಾಜಿನಲ್ಲಿ ಪ್ರೆಸ್ “ದಿ ಹಿಂದೂ” ಎಂಬ ಸ್ಟಿಕ್ಕರನ್ನು ಅಂಟಿಸಲಾಗಿತ್ತು.
ಆದರೆ ಕಾರಿನಲ್ಲಿ ಮಾಧ್ಯಮಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿ ಇರಲಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಮಾಧ್ಯಮ ಎಂದು ಸುಳ್ಳು ಚೀಟಿ ಅಂಟಿಸಿ ಸಂಚರಿಸುತ್ತಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ವಾಹನವನ್ನು ವಶಕ್ಕೆ ಪಡೆದು, ಕಾರು ಚಾಲಕನನ್ನು ದಸ್ತಗಿರಿ ಮಾಡಲಾಗಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಲಾಕ್ಡೌನ್: ಮಂಗಳೂರು ನಕಲಿ ಪತ್ರಕರ್ತರ ಅಬ್ಬರ, ವಾಹನದೊಂದಿಗೆ ವ್ಯಕ್ತಿಯ ಬಂಧನ
- Advertisement -
- Advertisement -
- Advertisement -