Saturday, June 6, 2026
Homeತಾಜಾ ಸುದ್ದಿಮನೆಯಿಂದಲೇ 'ಮೌಲ್ಯಮಾಪನ' ಮಾಡಲಿರುವ ಶಿಕ್ಷಕರು

ಮನೆಯಿಂದಲೇ 'ಮೌಲ್ಯಮಾಪನ' ಮಾಡಲಿರುವ ಶಿಕ್ಷಕರು

- Advertisement -
- Advertisement -

ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿಯ 10 ಮತ್ತು 12ನೇ ತರಗತಿಯ ಕೆಲ ವಿಷಯಗಳ ಪರೀಕ್ಷೆ ಈಗಾಗಲೇ ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ವಿಷಯಗಳ ಪರೀಕ್ಷೆಯನ್ನು ಜುಲೈ 1 ರಿಂದ 15 ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.

ಅಲ್ಲದೆ ಈಗಾಗಲೇ ಪೂರ್ಣಗೊಂಡಿರುವ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಇಂದಿನಿಂದ ಶಿಕ್ಷಕರ ಮನೆಗಳಲ್ಲೇ ನಡೆಸಲು ಸಿದ್ಧತೆ ನಡೆಸಲಾಗಿದ್ದು, ಶೀಘ್ರದಲ್ಲೇ ಫಲಿತಾಂಶ ಪ್ರಕಟಿಸುವ ಗುರಿ ಹೊಂದಲಾಗಿದೆ.

173 ವಿಷಯಗಳ ಸುಮಾರು 1.50 ಕೋಟಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನವನ್ನು 50 ದಿನಗಳೊಳಗೆ ಮುಗಿಸುವ ಗುರಿ ಹೊಂದಲಾಗಿದ್ದು, ಶಿಕ್ಷಕರ ಮನೆಗಳಿಗೆ ಉತ್ತರ ಪತ್ರಿಕೆಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

- Advertisement -

Latest News

error: Content is protected !!