Monday, April 29, 2024
Homeತಾಜಾ ಸುದ್ದಿಶ್ರೀನಗರ: ಭದ್ರತಾ ಪಡೆಗಳಿಂದ ಎನ್ಕೌಂಟರ್‌- ಓರ್ವ ಉಗ್ರನ ಹತ್ಯೆ

ಶ್ರೀನಗರ: ಭದ್ರತಾ ಪಡೆಗಳಿಂದ ಎನ್ಕೌಂಟರ್‌- ಓರ್ವ ಉಗ್ರನ ಹತ್ಯೆ

spot_img
- Advertisement -
- Advertisement -

ಶ್ರೀನಗರ​: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್‌ನಲ್ಲಿ ಓರ್ವ ಉಗ್ರ ಹತನಾಗಿದ್ದಾನೆ.

ಉಗ್ರರು ಅಡಗಿ ಕುಳಿತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು. ಈ ವೇಳೆ ಭದ್ರತಾ ಪಡೆಗಳ ಮೇಲೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ತತ್‌ಕ್ಷಣ ಸ್ಥಳದಲ್ಲಿ ಸುತ್ತುವರೆದ ಭದ್ರತಾಪಡೆಗಳು ಉಗ್ರರತ್ತ ಗುಂಡಿನ ದಾಳಿ ನಡೆಸಿದ್ದಾರೆ. ಎನ್ಕೌಂಟರ್‌ನಲ್ಲಿ ಓರ್ವ ಉಗ್ರ ಸಾವನ್ನಪ್ಪಿದ್ದಾನೆ. ಈತ ಈ ಹಿಂದೆ ಸಿಆರ್‌ಪಿಎಫ್ ಯೋಧರ ಮೇಲೆ ನಡೆದಿದ್ದ ದಾಳಿಯಲ್ಲಿ ಭಾಗಿಯಾಗಿದ್ದ‍ ಎಂದು ತಿಳಿದು ಬಂದಿದೆ.

ಮತ್ತೋರ್ವ ಇಲ್ಲಿ ಅಡಗಿ ಕುಳಿತಿರುವ ಬಗ್ಗೆ ಗೊತ್ತಾಗಿದ್ದು, ಆತನಿಗಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಐಜಿಪಿಯವರು ಭಾನುವಾರ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!